ನವದೆಹಲಿ: ಸಂಸತ್ತಿನಲ್ಲಿ ಆವೇಶಭರಿತರಾಗಿ ಮಾತನಾಡುವಾಗ ಸಂಸದರಿಗೆ ಕೆಲವೊಮ್ಮೆ ತಾವೇನು ಮಾತನಾಡುತ್ತಿದ್ದೇವೆ ಎನ್ನುವ ಅರಿವಿರುವುದಿಲ್ಲ. ಸಮಾಜವಾದಿ ಪಕ್ಷದ ಸಂಸದರೊಬ್ಬರೂ ರಾಜ್ಯ ಸಭೆಯಲ್ಲಿ ಹೀಗೇ ಎಡವಟ್ಟು ಮಾಡಿಕೊಂಡು ಆಕ್ರೋಶಕ್ಕೆ ಗುರಿಯಾಗಿದ್ದಾರೆ.
ಸಂಸದ ನರೇಶ್ ಅಗರ್ ವಾಲ್ ಹಿಂದೂ ದೇವರನ್ನು ಮದ್ಯಪಾನಕ್ಕೆ ಹೋಲಿಸಿ ಬಿಜೆಪಿ ಸದಸ್ಯರ ಆಕ್ರೋಶಕ್ಕೆ ಗುರಿಯಾದರು. ಗೋ ಹತ್ಯೆ ನಿಷೇಧದ ಬಗ್ಗೆ ಮಾತನಾಡುವಾಗ ಸಂಸದರು ಹೀಗೆ ಅವಹೇಳನಕಾರಿಯಾಗಿ ಮಾತನಾಡಿದ್ದಲ್ಲದೆ, ತಕ್ಷಣವೇ ತಮ್ಮ ಮಾತಿಗೆ ಕ್ಷಮೆಯಾಚಿಸಲು ಹಿಂದೇಟು ಹಾಕಿದರು.
ಈ ವೇಳೆ ಎದ್ದು ನಿಂತು ಮಾತನಾಡಿದ ವಿತ್ತ ಸಚಿವ ಅರುಣ್ ಜೇಟ್ಲಿ ತಾಕತ್ತಿದ್ದರೆ ನರೇಶ್ ಬೇರೆ ಧರ್ಮದ ದೇವರುಗಳ ಕುರಿತು ಹೀಗೇ ಮಾತನಾಡಲಿ ನೋಡೋಣ ಎಂದು ಸವಾಲು ಹಾಕಿದರು. ನಂತರ ಸ್ಪೀಕರ್ ಈ ಶಬ್ಧವನ್ನು ಕಡತದಿಂದ ತೆಗೆಯುವುದಾಗಿ ಹೇಳಿದರು. ನಂತರ ಸಂಸತ್ತಿನ ಕಲಾಪ ಮುಗಿದು ಹೊರಬಂದ ಮೇಲೆ ತಮ್ಮ ಹೇಳಿಕೆಗೆ ನರೇಶ್ ಕ್ಷಮೆ ಯಾಚಿಸಿದರು.