ಪಾಕಿಸ್ತಾನಿ ಎನ್ನಲು ಅವಮಾನ ಎನಿಸುತ್ತಿದೆ ಎಂದ ಪಾಕ್ ನಾಯಕಿ (ವಿಡಿಯೋ)

ಬುಧವಾರ, 28 ಸೆಪ್ಟಂಬರ್ 2016 (10:53 IST)
ಪಾಕಿಸ್ತಾನದ ರಕ್ತಪಿಪಾಸುತನಕ್ಕೆ ಅದರಿಂದ ಹೆಚ್ಚು ಬಾಧೆಗೊಳಪಟ್ಟಿರುವ ಭಾರತದಿಂದಷ್ಟೇ ಅಲ್ಲ, ಜಾಗತಿಕವಾಗಿಯೂ ವಿರೋಧ ವ್ಯಕ್ತವಾಗುತ್ತಿದೆ ಎಂಬುದು ಎಲ್ಲರಿಗೂ ತಿಳಿದಿರುವ ಸತ್ಯ. ಆದರೆ ಪಾಕ್ ದುರ್ವರ್ತನೆಗೆ ಆಂತರಿಕವಾಗಿಯೂ ವಿರೋಧವಿದೆ ಎಂಬುದು ಸಾಬೀತಾಗುವ ದೃಷ್ಟಾಂತಗಳು ಸಹ ಇತ್ತೀಚಿಗೆ ವರದಿಯಾಗುತ್ತಿವೆ.
ತನ್ನ ಪುಟ್ಟ ವಯಸ್ಸಿನ ಮಗಳ ಕೈಗೆ ಗನ್ ಕೊಟ್ಟು ಭಾರತಕ್ಕೆ ಎಚ್ಚರಿಕೆ ನೀಡುವ ದುಷ್ಟ ತಂದೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡದಾಗ ಸ್ವತಃ ಪಾಕ್ ನಾಗರಿಕರೇ ಇದನ್ನು ಖಂಡಿಸಿ ಪೆನ್ ಹಿಡಿಯಬೇಕಿರುವ ಕೈಯ್ಯಲ್ಲಿ ಗನ್ ಹಿಡಿಸಬೇಡಿ ಎಂದು ದುರುಳ ತಂದೆಗೆ ಬುದ್ಧಿ ಹೇಳಿದ್ದರು. ಈಗ ತಮ್ಮ ದೇಶದ ವರ್ತನೆಯನ್ನು ಪ್ರಜಾಪ್ರತಿನಿಧಿಯೇ ವಿರೋಧಿಸುವ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಓಡಾಡುತ್ತಿದೆ. 
 
ಪಾಕಿಸ್ತಾನದಲ್ಲಿ ದ್ವೇಷ, ರಕ್ತಪಾತ ಹೆಚ್ಚುತ್ತಿರುವುದರಿಂದ ರೋಸಿ ಹೋಗಿರುವ ಸಂಸದೆ ಫೋಜಿಯಾ ಇಜಾಜ್ ಖಾನ್ ಸಂಸತ್ತಿನಲ್ಲಿ ನಿಂತು ದಿಟ್ಟತನದಿಂದ ಮಾತನಾಡಿದ್ದಾಳೆ. 
 
ಈ ವಿಡಿಯೋ ಹಳೆಯದಾಗಿದ್ದರೂ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಹರಿದಾಡುತ್ತಿದೆ. 

 ಪಾಕಿಸ್ತಾನಿ ಎನ್ನಲು ಅವಮಾನ ಎನಿಸುತ್ತಿದೆ ಎಂದ ಪಾಕ್ ನಾಯಕಿ (ವಿಡಿಯೋ)
 
 

ವೆಬ್ದುನಿಯಾವನ್ನು ಓದಿ