ನಿಜವಾದ ಉಕ್ಕಿನ ಮನುಷ್ಯ ನೀವೇ ಎಂದು ಅಮಿತ್ ಶಾಗೆ ಹೊಗಳಿಕೆ ಕೊಟ್ಟಿದ್ಯಾರು ಗೊತ್ತಾ?
ಶುಕ್ರವಾರ, 30 ಆಗಸ್ಟ್ 2019 (11:16 IST)
ನವದೆಹಲಿ: ದೇಶದ ಮೊದಲ ಗೃಹ ಸಚಿವ ಸರ್ದಾರ್ ವಲ್ಲಭಾಯ್ ಪಟೇಲ್ ರನ್ನು ಉಕ್ಕಿನ ಮನುಷ್ಯ ಎನ್ನುತ್ತಾರೆ. ಆದರೆ ಆಧುನಿಕ ಉಕ್ಕಿನ ಮನುಷ್ಯ ನೀವೇ ಎಂದು ಅಮಿತ್ ಶಾಗೆ ಉದ್ಯಮಿ ಮುಖೇಶ್ ಅಂಬಾನಿ ಹೊಗಳಿಕೆ ನೀಡಿದ್ದಾರೆ.
ಪಂಡಿತ್ ದೀನದಯಾಳ್ ವಿವಿಯಲ್ಲಿ ನಡೆದ ಪದವಿ ಪ್ರಧಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಮುಖೇಶ್ ಅಂಬಾನಿ, ಅಮಿತ್ ಶಾಗೆ ನೀವು ನಿಜವಾದ ಉಕ್ಕಿನ ಮನುಷ್ಯ ಎಂದು ಹೊಗಳಿಕೆ ನೀಡಿದ್ದಾರೆ.
‘ಅಮಿತ್ ಭಾಯ್, ನೀವು ನಿಜವಾದ ಕರ್ಮಯೋಗಿ, ನೀವು ದೇಶದ ನಿಜವಾದ ಉಕ್ಕಿನ ಮನುಷ್ಯ. ಮೊದಲು ಗುಜರಾತ್, ಈಗ ದೇಶ, ನಿಮ್ಮಂತಹ ನಾಯಕರನ್ನು ಪಡೆಯಲು ಪುಣ್ಯ ಮಾಡಿತ್ತು’ ಎಂದು ಮುಖೇಶ್ ವೇದಿಕೆಯಲ್ಲಿದ್ದ ಗೃಹ ಸಚಿವ ಅಮಿತ್ ಶಾ ಮೇಲೆ ಹೊಗಳಿಕೆಯ ಮಹಾಪೂರ ಹರಿಸಿದ್ದಾರೆ.