ಸಮಾಜವಾದಿ ಪಕ್ಷದ ಹಾಲಿ ಮುಖ್ಯಸ್ಥ ಅಖಿಲೇಶ್ ಯಾದವ್, ಕಾಂಗ್ರೆಸ್ ಜತೆ ಮೈತ್ರಿ ಮಾಡಿಕೊಂಡಿದ್ದು, ಸಹ ಮುಲಾಯಂ ಅತೃಪ್ತಿಯನ್ನು ಹೆಚ್ಚಿಸಿದ್ದು, ಕಾಂಗ್ರೆಸ್‌ಗೆ ಬಿಟ್ಟುಕೊಟ್ಟ ಎಲ್ಲ 105 ಕ್ಷೇತ್ರಗಳಲ್ಲಿ ನಾಮಪತ್ರ ಸಲ್ಲಿಸುವಂತೆ ತಮ್ಮ ನಿಷ್ಠ ಬೆಂಬಲಿಗರಿಗೆ ಅವರು ಕರೆ ನೀಡಿದ್ದಾರೆ. ಈ ಮೂಲಕ ಅಖಿಲೇಶ್ ತಮ್ಮ ನಿಷ್ಠರನ್ನು ಕಡೆಗಣಿಸಿದ್ದಾರೆ ಎಂಬ ಅಸಮಧಾನವನ್ನು ತೀರಿಸಿಕೊಂಡಿದ್ದಾರೆ.
ಉತ್ತರ ಪ್ರದೇಶಲ್ಲಿ ಒಟ್ಟು 7 ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ಮೊದಲ ಎರಡು ಹಂತಗಳ ಚುನಾವಣೆಗೆ ನಾಮಪತ್ರ ಸಲ್ಲಿಕೆ ಮುಗಿದಿದೆ. ಮುಲಾಯಂ ಅವರ ಕರೆಯಂತೆ ಅವರ ನಿಷ್ಠರು ಕಣಕ್ಕಿಳಿದಲ್ಲಿ ಕಾಂಗ್ರೆಸ್ ಸಮಾಜವಾದಿ ಬಂಡಾಯ ಅಭ್ಯರ್ಥಿಗಳ ಸವಾಲಿನ ಬಿಸಿಯನ್ನು ಎದುರಿಸಬೇಕಾಗುತ್ತದೆ. ಮುಲಾಯಂ ಈ ನಡೆ ಕಾಂಗ್ರೆಸ್ ಗೆಲುವಿನ ಅವಕಾಶಕ್ಕೆ ಪೆಟ್ಟುಕೊಡುವುದಂತೂ ಸತ್ಯ.