ಮಾಡಲಿಂಗ್‌ಗಾಗಿ ಹೊಸ ಮುಖಗಳಿಗಾಗಿ ಹುಡುಕಾಟ ನಡೆಸುತ್ತಿದ್ದೇನೆ ಎಂದು ಯುವತಿಗೆ ಆಮಿಷ ತೋರಿಸಿ ಹೋಟೆಲ್ ಕೋಣೆಗೆ ಕರೆದುಕೊಂಡ ಬಂದ ಆರೋಪಿ ಬಿಸ್ವಾಸ್, ಆಕೆಯ ಖಾಸಗಿ ವಸ್ತುಗಳನ್ನು ಬಲವಂತವಾಗಿ ತೆಗೆದುಕೊಂಡಿದ್ದಲ್ಲದೇ ನಟನೊಂದಿಗಿರುವ ವಿವಾದ ಬಗೆಹರಿಸಲು 1 ಲಕ್ಷ ರೂಪಾಯಿಗಳನ್ನು ನೀಡುವಂತೆ ಒತ್ತಾಯಿಸಿದ್ದ ಎನ್ನಲಾಗಿದೆ.
ಆರೋಪಿ ಸುದೀಪ್ ಬಿಸ್ವಾಸ್ ತನ್ನನ್ನು ತಾನು ಪೊಲೀಸ್ ವೃತ್ತಿಯಲ್ಲಿರುವುದಾಗಿ ಪರಿಚಯಿಸಿಕೊಂಡು ಬಿಸ್ವಾಸ್, ನೀನು ವೇಶ್ಯಾವೃತ್ತಿಯಲ್ಲಿ ತೊಡಗಿರುವ ಬಗ್ಗೆ ಪೊಲೀಸರಿಗೆ ತಿಳಿದಿದೆ. ಒತ್ತಾಯಪೂರ್ವಕವಾಗಿ ಆಕೆಯ ಅರೆನಗ್ನ ಚಿತ್ರಗಳನ್ನು ತೆಗೆದುಕೊಂಡಿದ್ದಲ್ಲದೇ ತಾನೊಬ್ಬಳು ಕಾಲ್ ಗರ್ಲ್ ಎಂದು ನೀಡಿದ ಹೇಳಿಕೆಯನ್ನು ಸೆಲ್‌ಫೋನ್‌ನಲ್ಲಿ ರಿಕಾರ್ಡ್ ಮಾಡಿಕೊಂಡಿದ್ದಾನೆ.