ಮುಂಬೈನಲ್ಲಿ ಡೆಲ್ಟಾ ಪ್ಲಸ್ ಸೋಂಕಿಗೆ ಮೊದಲ ಬಲಿ!
ಬೃಹತ್ ಮುಂಬೈ ಕಾರ್ಪೊರೇಷನ್ ಮೂಲಗಳ ಪ್ರಕಾರ 63 ವರ್ಷದ ವೃದ್ಧೆ ಡೆಲ್ಟಾ ಪ್ಲಸ್ ಸೋಂಕಿಗೆ ಬಲಿಯಾಗಿದ್ದಾರೆ. ಕಳೆದ ಒಂದು ತಿಂಗಳಿನಿಂದ ಇವರು ಸೋಂಕಿನಿಂದ ಬಳಲುತ್ತಿದ್ದರು.
ವಿಚಿತ್ರ ಅಂದರೆ ಈ ಮಹಿಳೆ ಎರಡು ಡೋಜ್ ಲಸಿಕೆ ಪಡೆದಿದ್ದರು ಮತ್ತು ಟ್ರಾವೆಲ್ ಹಿಸ್ಟರಿ ಕೂಡ ಹೊಂದಿಲ್ಲ. ಆರಂಭದಲ್ಲಿ ಗಂಟಲು ಸೋಂಕು ಕಾಣಿಸಿಕೊಂಡಿದ್ದು, ನಂತರ ಕೊರೊನಾ ವೈರಸ್ ಕಾಣಿಸಿಕೊಂಡಿತ್ತು.
ಜುಲೈ 21ರಂದು ವೃದ್ಧೆಗೆ ಕೊರೊನಾ ವೈರಸ್ ಕಾಣಿಸಿಕೊಂಡಿದ್ದು, ಜುಲೈ 27ರಂದು ಮೃತಪಟ್ಟರು ಎಂದು ವೈದ್ಯರು ವಿವರಗಳನ್ನು ಬಹಿರಂಗಪಡಿಸಿದ್ದಾರೆ.