ಮುಂಬೈ ಸ್ಫೋಟ: ಇಬ್ಬರಿಗೆ ಗಲ್ಲು, ಇಬ್ಬರಿಗೆ ಜೀವಾವಧಿ, ಮತ್ತೊಬ್ಬನಿಗೆ 10 ವರ್ಷ ಶಿಕ್ಷೆ

ಗುರುವಾರ, 7 ಸೆಪ್ಟಂಬರ್ 2017 (13:10 IST)
1993 ರಲ್ಲಿ ನಡೆದ ಮುಂಬೈ ಸರಣಿ ಬಾಂಬ್ ಸ್ಫೋಟ ಪ್ರಕರಣದಲ್ಲಿ ಭೂಗತ ಪಾತಕಿ ಅಬು ಸಲೇಂಗೆ ಟಾಡಾ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. 
ಮುಂಬೈನ ಟಾಡಾ ಕೋರ್ಟ್, 1993ರ ಮುಂಬೈ ಸರಣಿ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ದೋಷಿ ಅಬು ಸಲೇಂಗೆ ಜೀವಾವಧಿ ಶಿಕ್ಷೆ ಮತ್ತು 2 ಲಕ್ಷ ರೂಪಾಯಿ ದಂಡ ವಿಧಿಸಿದೆ.
 
ಮತ್ತೊಬ್ಬ ದೋಷಿ ಕರಿಮುಲ್ಲಾಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಇತರ ಮೂವರು ದೋಷಿಗಳಾದ ಫಿರೋಜ್ ಖಾನ್, ಮೊಹಮ್ಮದ್ ತಾಹೀರ್ ಮರ್ಚಂಟ್ ತಾಹೀರ್ ಟಕ್ಲ್ಯಾ, ರಿಯಾಜ್ ಅಹ್ಮದಿ ಸಿದ್ದೀಕಿ ವಿರುದ್ಧ ಕೋರ್ಟ್ ಇಂದು ತೀರ್ಪು ನೀಡಲಾಗಿದೆ.
 
ಫಿರೋಜ್ ಖಾನ್‌, ಮೊಹಮ್ಮದ್ ತಾಹೀರ್ ಮರ್ಚಂಟ್‌ಗೆ ಮರಣದಂಡನೆ ಶಿಕ್ಷೆ ವಿಧಿಸಲಾಗಿದ್ದು, ರಿಯಾಜ್ ಅಹ್ಮದ್ ಸಿದ್ದಿಕಿಗೆ 10 ವರ್ಷ ಶಿಕ್ಷೆ ನೀಡಿ ಆದೇಶ ಹೊರಡಿಸಿದೆ. 
 
ಮುಸ್ತಪಾ ದೊಸ್ಸಾ ಎನ್ನುವ ಉಗ್ರ, ಕೋರ್ಟ್‌ನಿಂದ ಸರಣಿ ಬಾಂಬ್ ಸ್ಫೋಟ ಪ್ರಕರಣದಲ್ಲಿ ಅಪರಾಧಿ ಎಂದು ಘೋಷಿಸಿದ ಕೆಲವೇ ದಿನಗಳಲ್ಲಿ ಸಾವನ್ನಪ್ಪಿದ್ದಾನೆ. ಆತನ ಮೇಲಿದ್ದ ಪ್ರಕರಣವನ್ನು ರದ್ದುಗೊಳಿಸಲಾಗಿತ್ತು.  
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ