ಪ್ರಿಯಕರನೊಂದಿಗೆ ಸೇರಿ ಪತಿ ಕೊಲೆ : ಪತ್ನಿಗೆ ಜೀವಾವಧಿ ಶಿಕ್ಷೆ

ಸೋಮವಾರ, 3 ಏಪ್ರಿಲ್ 2023 (12:15 IST)
ಚಂಡೀಗಢ : ಪತಿಯನ್ನು ಕೊಂದಿದ್ದ ಮಹಿಳೆಗೆ ಹಾಗೂ ಆಕೆಯ ಪ್ರಿಯಕರನಿಗೆ ಶುಕ್ರವಾರ ನುಹ್ ಜಿಲ್ಲಾ ನ್ಯಾಯಾಲಯ ಜೀವಾವಧಿ ಶಿಕ್ಷೆ ಪ್ರಕಟಿಸಿದೆ.
 
ಸೋಹ್ನಾ ನಿವಾಸಿ ಗೀತಾ ಹಾಗೂ ದೆಹಲಿಯ ಚತ್ತರ್ಪುರ ನಿವಾಸಿ ಸುರ್ಜಿತ್ ಚೌಹಾನ್ ಶಿಕ್ಷೆಗೆ ಗುರಿಯಾದ ಅಪರಾಧಿಗಳು. 2017ರಲ್ಲಿ ವಿಪಿನ್ ತೋಮರ್ ಅವರನ್ನು ಕೊಲೆ ಮಾಡಲಾಗಿತ್ತು. ಮೃತ ದೇಹವನ್ನು ಶಿಕ್ರಾವಾ ರಸ್ತೆಯ ಬಳಿ ಎಸೆದು ಹೋಗಿದ್ದರು.

ಅರ್ಧ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದ ವಿಪಿನ್ ತೋಮರ್ ಮೃತದೇಹದ ಬಗ್ಗೆ ಸ್ಥಳೀಯ ನಿವಾಸಿ ಓಂ ಪ್ರಕಾಶ್ ಎಂಬವರು ನಾಗಿನಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.

ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಸಂದೀಪ್ ಕುಮಾರ್ ದುಗ್ಗಲ್  ಅವರು ಕೊಲೆಗಾರರನ್ನು ಬುಧವಾರ ಅಪರಾಧಿಗಳು ಎಂದು ಘೋಷಿಸಿ, ಶುಕ್ರವಾರ ಶಿಕ್ಷೆ ಪ್ರಕಟ ಮಾಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ