ಲಕ್ನೋ : ಉತ್ತರ ಪ್ರದೇಶದಲ್ಲಿ ಮಾನ್ಯತೆ ಪಡೆಯದಿರುವ ಮದರಸಾಗಳ ಮೇಲೆ ಸಮೀಕ್ಷೆ ನಡೆಸುವ ನಿರ್ಧಾರವನ್ನು ಯೋಗಿ ಆದಿತ್ಯನಾಥ್ ಅವರ ಸರ್ಕಾರ ತೆಗೆದುಕೊಂಡಿದೆ.
ಈ ನಡೆಯನ್ನು ಇಸ್ಲಾಮಿಕ್ ಪ್ರಮುಖ ಸಂಸ್ಥೆ ಜಮಿಯತ್ ಉಲೇಮಾ-ಎ-ಹಿಂದ್ ಬೆಂಬಲಿಸಲು ನಿರ್ಧರಿಸಿದೆ.
ಈ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಉಲೇಮಾ-ಎ-ಹಿಂದ್ ರಾಷ್ಟ್ರೀಯ ಅಧ್ಯಕ್ಷ ಮೌಲಾನಾ ಮೊಹಮ್ಮದ್ ಅಸದ್ ಮದನಿ ಅವರು, ಇಂದು ಮದರಸಾಗಳನ್ನು ಉತ್ತಮ ರೀತಿಯಲ್ಲಿ ನೋಡಲಾಗುತ್ತಿಲ್ಲ.
ನಮ್ಮನ್ನು ಅರ್ಥಮಾಡಿಕೊಳ್ಳುವಂತೆ ನಾನು ಸರ್ಕಾರಕ್ಕೆ ಮನವಿ ಮಾಡಿಕೊಳ್ಳುತ್ತೇನೆ. ನಾವು ಯಾವಾಗಲೂ ನಮ್ಮ ಕರ್ತವ್ಯವನ್ನು ಅನುಸರಿಸುತ್ತೇವೆ. ನಾವು ಈ ಬಗ್ಗೆ ಮಾತನಾಡಲು ಸದಾ ಸಿದ್ಧರಿದ್ದೇವೆ, ಆದರೆ ಬಲವಂತದಿಂದಲ್ಲ. ನಮಗೆ ಸಮಯ ನೀಡಿ, ನಾವು ಸಂಬಂಧಪಟ್ಟ ಅಧಿಕಾರಿಗಳನ್ನು ಭೇಟಿ ಮಾಡುತ್ತೇವೆ ಎಂದು ತಿಳಿಸಿದರು.