ಅದಕ್ಕೆ ಮುನ್ನುಡಿಯಾಗಿ ಸಮಾಜವಾದಿ ಪಕ್ಷದ ನಾಯಕ ಸಿಕಂದರ್ ಅಲಿ ಸಮಾಜವಾದಿ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಈ ಕುರಿತು ಮಾತನಾಡಿದ ಸಿಕಂದರ್ ಅಲಿ ಮುಲಾಯಂ ಸಿಂಗ್ ಕಟ್ಟಿದ ಪಕ್ಷದಲ್ಲಿ ಬೇರೆಯದೆ ನಡೆಯುತ್ತಿದೆ ಇತ್ತೀಚಿಗೆ ನಡೆದ ಚುನಾವಣೆಯಲ್ಲಿ ಪಕ್ಷ 111 ಸ್ಥಾನಗಳನ್ನು ಗೆಲುವ ಮೂಲಕ ಪ್ರಬಲ ವಿರೋಧ ಪಕ್ಷವಾಗಿ ಹೊರಹೊಮ್ಮಿದೆ. ಆದರೆ, ಪಕ್ಷದ ಏಳಿಗೆಗೆ ಶ್ರಮಿಸಿದ ಮುಸ್ಲಿಂ ನಾಯಕರಾದ ಅಜಂ ಖಾನ್ ಹಾಗೂ ನಹಿದ್ ಹಸನ್ ಕ್ರಮ ಬಂಧನ ವಿಚಾರದಲ್ಲಿ ಪಕ್ಷ ಮೌನ ವಹಿಸಿರುವುದು ಅಲ್ಪಸಂಖ್ಯಾತರ ಕಡೆಗಣನೆಗೆ ಮುನ್ನುಡಿ ಬರೆದಂತ್ತಿದೆ ಎಂದು ಕಿಡಿಕಾರಿದ್ದಾರೆ.
ಮುಂದುವರೆದು, ತಮ್ಮ ಪಕ್ಷದ ಶಾಸಕರ ಪರ ನಿಲ್ಲಲಾಗದ ವ್ಯಕ್ತಿ ರಾಜ್ಯದ ಸಮಸ್ಯೆಗಳ ಪರ ಹೇಗೆ ನಿಲ್ಲುತ್ತಾನೆ ಎಂದು ಪ್ರಶ್ನಿಸಿದ್ದಾರೆ. ಅಖಿಲೇಶ್ ರಾಜ್ಯದಲ್ಲಿ ಮುಸ್ಲಿಮರ ಮೇಲೆ ಆಗುತ್ತಿರುವ ದಬ್ಬಾಳಿಕೆ ಬಗ್ಗೆ ತಮ್ಮ ಧ್ವಮಿಯನ್ನು ಎತ್ತುವುದಿಲ್ಲ ಆದರೆ, ಮುಸ್ಲಿಮರ ಮತಗಳು ಮಾತ್ರ ಅವರಿಗೆ ಬೇಕು ಮುಸ್ಲಿಮರನ್ನು ಅವರು ಮತಬ್ಯಾಂಕ್ಕಾಗಿ ಪರಿಗಣಿಸಿದ್ದಾರೆ ಎಂದು ಆರೋಪಿಸಿದ್ದಾರೆ.