ದೇಶದಲ್ಲಿ 2000ಕ್ಕೆ ಜಿಗಿದ ಕೊರೊನಾ: 5 ರಾಜ್ಯಗಳಿಗೆ ಕೇಂದ್ರ ಸೂಚನೆ
ದೇಶದಲ್ಲಿ ಕಳೆದ 24 ಗಂಟೆಯಲ್ಲಿ 2380 ಕೊರೊನಾ ಸೋಂಕು ಪ್ರಕರಣಗಳು ಪತ್ತೆಯಾಗಿದ್ದು, ಮತ್ತೆ ಸೋಂಕು ಹೆಚ್ಚಳ ಭೀತಿ ಆವರಿಸಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ 5 ರಾಜ್ಯಗಳಲ್ಲಿ ಮುನ್ನೆಚ್ಚರಿಕೆ ವಹಿಸುವಂತೆ ಸೂಚಿಸಿದೆ.
ಕೇಂದ್ರ ಸರಕಾರ ಗುರುವಾರ ನೀಡಿದ ಮಾಹಿತಿ ಪ್ರಕಾರ ದೇಶದಲ್ಲಿ ಒಂದು ದಿನ ಕುಸಿತ ಕಂಡಿದ್ದ ಕೊರೊನಾ ಸೋಂಕು ಪ್ರಮಾಣ ಮತ್ತೆ 2000 ಗಡಿ ದಾಟಿದೆ. ಇದರಿಂದ ಸಕ್ರಿಯ ಪ್ರಕರಣಗಳ ಸಂಖ್ಯೆ 13,433ಕ್ಕೆ ಜಿಗಿತ ಕಂಡಿದೆ.