Nagpur: ಗಂಡನ ವ್ಯಾಟ್ಸಪ್ ಚ್ಯಾಟ್ ಹ್ಯಾಕ್ ಮಾಡಿದ ಪತ್ನಿಗೆ ಕಾದಿತ್ತು ಶಾಕ್: ಅಲೆಲೆ... ಗಂಡನ ಲೀಲೆಯೇ

Krishnaveni K

ಮಂಗಳವಾರ, 1 ಏಪ್ರಿಲ್ 2025 (15:51 IST)
ನಾಗ್ಪುರ: ಪತಿಯ ನಡವಳಿಕೆಯಿಂದ ಸಂಶಯಗೊಂಡಿದ್ದ ಪತ್ನಿ ಆತನ ವ್ಯಾಟ್ಸಪ್ ಹ್ಯಾಕ್ ಮಾಡಿ ಚೆಕ್ ಮಾಡಿದಾಗ ನಿಜಕ್ಕೂ ಶಾಕ್ ಕಾದಿತ್ತು. ಗಂಡನ ರಾಸಲೀಲೆಗಳೆಲ್ಲಾ ಬಯಲಾಗಿತ್ತು.

ನಾಗ್ಪುರದಲ್ಲಿ ಈ ಘಟನೆ ನಡೆದಿದೆ. 33 ವರ್ಷದ ಪತಿ ಅಬ್ದುಲ್ ಶರೀಖ್ ಖುರೇಷಿ ಎಂಬಾತನ ರಾಸಲೀಲೆಗಳನ್ನು ನೋಡಿ ಶಾಕ್ ಆದ ಪತ್ನಿ ಪೊಲೀಸರಿಗೆ ದೂರು ನೀಡಿದ್ದು ಆತ ಈಗ ಅರೆಸ್ಟ್ ಆಗಿದ್ದಾನೆ.

ಸಾಮಾನ್ಯವಾಗಿ ಪತ್ನಿಯರು ಪತಿಯ ಫೋನ್ ಮೇಲೆ ಒಂದು ಹದ್ದಿನಗಣ್ಣಿಟ್ಟಿರುತ್ತಾರೆ. ಇದೇ ರೀತಿ ಈ ಮಹಿಳೆಗೂ ಪತಿಯ ನಡವಳಿಕೆ ಮೇಲೆ ಯಾಕೋ ಸಂಶಯವಾಗಿತ್ತು. ಇದೇ ಕಾರಣಕ್ಕೆ ಪತಿಯ ವ್ಯಾಟ್ಸಪ್ ನ್ನೇ ಹ್ಯಾಕ್ ಮಾಡಿದ್ದಾಳೆ. ಬಳಿಕ ಆತನ ಚ್ಯಾಟ್ ಹಿಸ್ಟರಿಯನ್ನೆಲ್ಲಾ ಪರಿಶೋಧಿಸಿದ್ದಾಳೆ.

ಈ ವೇಳೆ ಪತಿಯ ವ್ಯಾಟ್ಸಪ್ ನಲ್ಲಿ ಅನೇಕ ಪೋರ್ನ್ ವಿಡಿಯೋಗಳು ಸಿಕ್ಕಿವೆ. ಅಲ್ಲದೆ, ಕೆಲವು ಯುವತಿಯರಿಗೆ ಅಶ್ಲೀಲ ವಿಡಿಯೋಗಳನ್ನಿಟ್ಟಕೊಂಡು ಬ್ಲ್ಯಾಕ್ ಮೇಲ್ ಮಾಡುತ್ತಿದ್ದ ವಿಚಾರವೂ ಬಹಿರಂಗವಾಗಿದೆ. ತನಗೆ ಮದುವೆಯಾಗಿ ಮಗು ಇರುವ ವಿಚಾರವನ್ನಿಟ್ಟುಕೊಂಡು ಬೇರೆ ಬೇರೆ ಯುವತಿಯರ ಜೊತೆ ನವರಂಗಿ ಆಟವಾಡುತ್ತಿದ್ದ.

ಇದನ್ನೆಲ್ಲಾ ತಿಳಿದ ಪತ್ನಿ ಸಾಕ್ಷಿ ಸಮೇತ ಪೊಲೀಸರಿಗೆ ದೂರು ನೀಡಿದ್ದಾಳೆ. ಅದರಂತೆ ಪೊಲೀಸರು ಪತಿ ಅಬ್ದುಲ್ ಖುರೇಶಿಯನ್ನು ಅರೆಸ್ಟ್ ಮಾಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ