ತಮಿಳುನಾಡಿನಲ್ಲಿ ‘ಅಮ್ಮಾ ಸ್ಕೂಟರ್ ಸ್ಕೀಮ್’ ಯೋಜನೆಗೆ ಚಾಲನೆ ನೀಡಲಿರುವ ನಮೋ

ಅತಿಥಾ

ಗುರುವಾರ, 22 ಫೆಬ್ರವರಿ 2018 (16:00 IST)
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ತಮಿಳುನಾಡಿನ ಮಾಜಿ ಸಿಎಂ, ದಿವಂಗತ ಜಯಲಲಿತಾ ಅವರ ಹುಟ್ಟುಹಬ್ಬವಾದ ಫೆಬ್ರವರಿ 24 ರಂದು ಮಹಿಳೆಯರಿಗಾಗಿ ತಮಿಳುನಾಡು ಸರ್ಕಾರ ಮಾಡಿರುವ ‘ಅಮ್ಮಾ ಸ್ಕೂಟರ್ ಸ್ಕೀಮ್’ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಲಿದ್ದಾರೆ.
"ಈ ಯೋಜನೆ ಅಡಿಯಲ್ಲಿ ಮಹಿಳೆಯರಿಗೆ ಸರ್ಕಾರ 50% ಸಬ್ಸಿಡಿ ದರದಲ್ಲಿ ಸ್ಕೂಟರ್ ನೀಡಲಿದೆ. ಮಹಿಳೆಯರಿಗಾಗಿ ಮಾಡಿರುವ ಈ ಯೋಜನೆಯು ಅಮ್ಮ (ಜಯಲಲಿತಾ) ಅವರ ಕನಸ್ಸಾಗಿತ್ತು. 2016ರ ಚುನಾವಣಾ ಪ್ರಣಾಳಿಕೆಯಲ್ಲೂ, ಗೆಲುವಿನ ಬಳಿಕ ಮಹಿಳೆಯರಿಗೆ ಸ್ಕೂಟರ್ ನೀಡುವುದಾಗಿ ಜಯಲಲಿತಾ ಘೋಷಣೆ ಮಾಡಿದ್ದರು." ಎಂದು ಎಐಎಡಿಎಂಕೆ ಹಿರಿಯ ನಾಯಕ ಮೈತ್ರಿಯನ್ ಹೇಳಿದ್ದಾರೆ.
 
ಜಯಲಲಿತಾ ನಿಧನದ ನಂತರ ಎಐಎಡಿಎಂಕೆ ಪಕ್ಷ ಒಡೆದು ಹೋಳಾಗಿರುವಾಗ ಸಿಎಂ ಪಳನಿಸ್ವಾಮಿ ಜೊತೆ ಕೈಜೋಡಿಸಿ ಪಕ್ಷವನ್ನು ಒಗ್ಗೂಡಿಸುವಂತೆ ನರೇಂದ್ರ ಮೋದಿಯವರೆ ಓ ಪನ್ನೀರಸೆಲ್ವಂಗೆ ಸಲಹೆ ನೀಡಿದ್ದರಂತೆ. ಈ ವಿಚಾರವನ್ನು ಪನ್ನೀರಸೆಲ್ವಂ ಬಹಿರಂಗಪಡಿಸಿ "ಜಯಲಲಿತಾ ಕನಸನ್ನು ಸಾಕಾರ ಮಾಡಲು ಮೋದಿ ಸಾಥ್ ನೀಡ್ತಿರೋದು ನಿಜಕ್ಕೂ ಶ್ಲಾಘನೀಯ" ಎಂದು ಹೇಳಿದ್ದಾರೆ.
 
ಮೂಲಗಳ ಪ್ರಕಾರ - ರಾಜ್ಯ ಸರಕಾರದ ಆಮಂತ್ರಣವನ್ನು ಸ್ವೀಕರಿಸುತ್ತಾ, ಪ್ರಧಾನಮಂತ್ರಿ ಕಲೈವನರ್ ಅರಂಗಂನಲ್ಲಿ ನಡೆಯಲಿರುವ ಸಮಾರಂಭದಲ್ಲಿ ಪಾಲ್ಗೊಳ್ಳಲು ಸಮ್ಮತಿಸಿದ್ದಾರೆ. ಮುಖ್ಯಮಂತ್ರಿ ಎಡಪಾದಿ ಕೆ ಪಳನಿಸ್ವಾಮಿ, ಉಪಮುಖ್ಯಮಂತ್ರಿ ಓ ಪನ್ನೀರ್ಸೆಲ್ವಂ ಮತ್ತು ಇತರ ಉನ್ನತ ಅಧಿಕಾರಿಗಳೊಂದಿಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ವೇದಿಕೆಯನ್ನು ಹಂಚಿಕೊಳ್ಳಲಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ