ಸಿಎಂ ಮಮತಾ ಮೇಲೆ ಆಗಿದ್ದು ದಾಳಿಯಲ್ಲ, ಆಕ್ಸಿಡೆಂಟ್

ಶನಿವಾರ, 13 ಮಾರ್ಚ್ 2021 (10:44 IST)
ಕೋಲ್ಕೊತ್ತಾ: ಸಿಎಂ ಮಮತಾ ಬ್ಯಾನರ್ಜಿ ಮೇಲೆ ನಂದಿಗ್ರಾಮದಲ್ಲಿ ಚುನಾವಣೆ ಪ್ರಚಾರದ ವೇಳೆ ನಡೆದಿದ್ದು ದಾಳಿಯಲ್ಲ, ಅದು ಆಕ್ಸಿಡೆಂಟ್ ಅಷ್ಟೇ ಎಂದು ಪ.ಬಂಗಾಲ ಮುಖ್ಯ ಕಾರ್ಯದರ್ಶಿಗಳು ಚುನಾವಣಾ ಆಯೋಗಕ್ಕೆ ವರದಿ ನೀಡಿದ್ದಾರೆ.

 

ನಂದಿಗ್ರಾಮದಲ್ಲಿ ಪ್ರಚಾರ ವೇಳೆ ಯಾರೋ ತನ್ನ ಮೇಲೆ ದಾಳಿ ನಡೆಸಿದ್ದರು. ಈ ವೇಳೆ ನೂಕುನುಗ್ಗಲಿನಲ್ಲಿ ತನ್ನ ಕಾಲಿಗೆ ಕಾರಿನ ಬಾಗಿಲು ಬಡಿದು ಕಾರು ಮುರಿತವಾಗಿದೆ ಎಂದು ಮಮತಾ ಆರೋಪಿಸಿದ್ದರು. ಆದರೆ ಇದು ಡ್ರಾಮಾ ಎಂದು ಬಿಜೆಪಿ ವ್ಯಂಗ್ಯ ಮಾಡಿತ್ತು.

ಇದರ ಬಗ್ಗೆ ವರದಿ ಸಲ್ಲಿಸಿರುವ ಕಾರ್ಯದರ್ಶಿಗಳು ಯಾರೂ ಬೇಕೆಂದೇ ಮಮತಾ ಮೇಲೆ ದಾಳಿ ಮಾಡಿಲ್ಲ. ಇದೊಂದು ಆಕಸ್ಮಿಕವಾಗಿ ನಡೆದ ಘಟನೆಯಷ್ಟೇ ಎಂದು ವರದಿ ನೀಡಿದೆ. ಇನ್ನು, ಸಾಮಾಜಿಕ ಜಾಲತಾಣದಲ್ಲಿ ಮಮತಾ ಕಾಲಿಗೆ ಹಾಕಲಾಗಿದ್ದ ದಪ್ಪ ಬ್ಯಾಂಡೇಜ್ ಬಗ್ಗೆ ಸಾಕಷ್ಟು ಟ್ರೋಲ್ ಕೂಡಾ ನಡೆದಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ