ಸೌರಾಷ್ಟ್ರದ ಪ್ರದೇಶದ ವಿಸ್ವಾಡಾರ್, ಸಾವರ್‌ಕುಂಡ್ಲಾ ಮತ್ತು ಅಮ್ರೇಲಿಯಲ್ಲಿ ಮೂರು ರ್ಯಾಲಿಗಳನ್ನು ಉದ್ದೇಶಿಸಿ ಮಾತನಾಡಿದ ಗಾಂಧಿ, ರಾಫೆಲ್ ಒಪ್ಪಂದದ ಬಗ್ಗೆ "ಮೌನ" ಮತ್ತು ಕೈಗಾರಿಕೋದ್ಯಮಿಗಳನ್ನು ಪೋಷಿಸುತ್ತಿರುವ ಬಗ್ಗೆ ವಾಗ್ದಾಳಿ ನಡೆಸಿದರು.
2015ರಲ್ಲಿ ನಡೆದ ಮೀಸಲಾತಿ ಕೋಟಾ ಹೋರಾಟದ ಪ್ರಸ್ತಾಪವನ್ನು ಉಲ್ಲೇಖಿಸಿ, ಪಾಟೀದಾರ್ ಸಮುದಾಯದ 14 ಸದಸ್ಯರು ಪೊಲೀಸ್ ಫೈರಿಂಗ್‌ನಲ್ಲಿ ಕೊಲ್ಲಲ್ಪಟ್ಟರು. ಒಂದು ವೇಳೆ, ಯಾರಾದರೂ ಪ್ರತಿಭಟನೆಯ ಧ್ವನಿ ಎತ್ತಿದಲ್ಲಿ ಅವರ ಮೇಲೆ ಹಲ್ಲೆ ನಡೆಸಲಾಗುತ್ತಿತ್ತು. ಇಲ್ಲವೇ ಪೊಲೀಸರ ಗುಂಡುಗಳನ್ನು ಎದುರಿಸಬೇಕಾಗಿತ್ತು ಎಂದು ಕಾಂಗ್ರೆಸ್ ಪಕ್ಷದ ಉಪಾಧ್ಯಕ್ಷ ರಾಹುಲ್ ಗಾಂಧಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.