ಅಮೆರಿಕ ನಟಿ ಮೇಘನ್ ಮರ್ಕ್ಲೆ ವಿವಾಹವಾಗಲಿರುವ ಬ್ರಿಟನ್ ಪ್ರಿನ್ಸ್ ಹ್ಯಾರಿ

ಸೋಮವಾರ, 27 ನವೆಂಬರ್ 2017 (19:28 IST)
ಲಂಡನ್: ಬ್ರಿಟನ್‌ನ ಯುವರಾಜ ಪ್ರಿನ್ಸ್ ಹ್ಯಾರಿ ಮತ್ತು ಅಮೆರಿಕದ ಹಾಟ್ ನಟಿ ಮೇಘನ್ ಮರ್ಕಲೆ ಮಧ್ಯೆ ನಿಶ್ಚಿತಾರ್ಥವಾಗಿದ್ದು ಮುಂದಿನ ವರ್ಷದಲ್ಲಿ ವಿವಾಹವಾಗುವುದಾಗಿ ಘೋಷಿಸಿದ್ದಾರೆ. 
ಬ್ರಿಟಿಷ್ ಸಿಂಹಾಸನಕ್ಕೆ ರಾಣಿ ಎಲಿಜಬೆತ್ ಮೊಮ್ಮಗ 33 ವರ್ಷ ವಯಸ್ಸಿನ ಹ್ಯಾರಿ  ಮತ್ತು ಯುಎಸ್ ಟಿವಿ ಲೀಗಲ್ ಡ್ರಾಮಾ ಎನ್ನುವ ಧಾರವಾಹಿಯಲ್ಲಿ ನಟಿಸಿ ಖ್ಯಾತಿ ಗಳಿಸಿದ್ದ ನಟಿ ಮೇಘನ್ ಕಳೆದ ತಿಂಗಳು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
 
"ಪ್ರಿನ್ಸ್ ಹ್ಯಾರಿ  ಕುಟುಂಬದ ರಾಣಿ ಮತ್ತು ಇತರ ನಿಕಟ ಸದಸ್ಯರಿಗೆ ವಿವಾಹದ ಬಗ್ಗೆ ಮಾಹಿತಿ ನೀಡಿದ್ದಾರೆ. ಮಾರ್ಕ್ಲೆಯ ಹೆತ್ತವರ ಆಶೀರ್ವಾದ ಪಡೆದಿದ್ದಾರೆ ಎಂದು ಪ್ರಿನ್ಸ್ ಚಾರ್ಲ್ಸ್ ತಿಳಿಸಿದ್ದಾರೆ.
 
ಪ್ರಿನ್ಸ್ ಹ್ಯಾರಿ ವಿವಾಹಕ್ಕೆ ಗ್ರೀನ್ ಸಿಗ್ನಲ್ ನೀಡಿದ ರಾಣಿ ಎಲಿಜಾಬೆತ್, ತಮ್ಮ ಪತಿ ಪ್ರಿನ್ಸ್ ಫಿಲಿಪ್ ಕೂಡಾ ಸಂತಸಗೊಂಡಿದ್ದಾರೆ  ಎಂದು ಬಕ್ಕಿಂಗ್‌ಹ್ಯಾಮ್ ವಕ್ತಾರರು ಮಾಹಿತಿ ನೀಡಿದ್ದಾರೆ. 
 
ವಿವಾಹ ವಿಚ್ಛೇದನವಾದ ಹ್ಯಾರಿ ಮತ್ತು ಮಾರ್ಕ್ ಅವರು ಸ್ನೇಹಿತರ ಮೂಲಕ ಪರಿಚಯಿಸಲ್ಪಟ್ಟ ನಂತರ 2016 ರ ಜುಲೈನಲ್ಲಿ ಭೇಟಿಯಾದರು.
 
ಕಳೆದ 2016ರಲ್ಲಿ ಇಬ್ಬರು ವಿಚ್ಚೇದಿತರಾಗಿದ್ದು ಗೆಳೆಯರ ಮೂಲಕ ಪರಿಚಯವಾಗಿ ಇದೀಗ ಪರಿಚಯ ವಿವಾಹದವರೆಗೆ ಬಂದಿದೆ ಎಂದು ಮೂಲಗಳು ತಿಳಿಸಿವೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ