ಕರ್ನಾಟಕದ ಮೇಲೂ ಮೋದಿ-ಶಾ ಕಣ್ಣು.. ದೆಹಲಿಯಲ್ಲಿ ಸಂಸದರ ಸಭೆ
ಶುಕ್ರವಾರ, 31 ಮಾರ್ಚ್ 2017 (09:35 IST)
5 ರಾಜ್ಯಗಳ ಚುನಾವಣೆಗಳ ಬಳಿಕ ಪ್ರಧಾನಮಂತ್ರಿ ನರೇಂದ್ರಮೋದಿ ಮತ್ತು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ತಮ್ಮ ದೃಷ್ಟಿಯನ್ನ ಕರ್ನಾಟಕದ ಮೇಲೆ ನೆಟ್ಟಿದ್ದಾರೆ. ದೆಹಲಿಯ ಲೋಕ್ ಕಲ್ಯಾಣ್ಮಾ ರ್ಗ್`ನಲ್ಲಿರುವ ಪ್ರಧಾನಿ ನಿವಾಸದಲ್ಲಿ ಕರ್ನಾಟಕ, ಜಾರ್ಖಂಡ್, ತಮಿಳುನಾಡು, ತೆಲಂಗಾಣ ಸೇರಿದಂತೆ ಹಲವು ಸಂಸದರನ್ನ ಉಪಾಹಾರ ಕೂಟಕ್ಕೆ ಆಹ್ವಾನಿಸಲಾಗಿದ್ದು, ಕರ್ನಾಟಕದ ಚುನಾವಣೆ ಸೇರಿದಂತೆ ಹಲವು ವಿಷಯಗಳ ಚರ್ಚೆ ನಡೆಯುತ್ತಿದೆ..
ಚುನಾವಣೆಗೆ ರಣತಂತ್ರ: 2018ರಲ್ಲಿ ಬರಲಿರುವ ವಿಧಾನಸಭೆ ಚುನಾವಣೆ ಮತ್ತು ಲೋಕಸಭೆ ಚುನಾವಣೆಗಳ ಬಗ್ಗೆ ಸಭೆಯಲ್ಲಿ ರಣತಂತ್ರ ರಚಿಸಲಿದ್ದಾರೆ ಎಂದು ತಿಳಿದುಬಂದಿದೆ. ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯದ ಪರಿಸ್ಥಿತಿ ಬಗ್ಗೆ ಸಂಸದರಿಂದ ಮೋದಿ ಮತ್ತು ಅಮಿತ್ ಶಾ ಮಾಹಿತಿ ಪಡೆಯಲಿದ್ದಾರೆ. ವಿಧಾನಸಭಾ ಚುನಾವಣೆಯಲ್ಲಿ ಜನರ ಮನವೊಲಿಕೆಗೆ ಕಾಂಗ್ರೆಸ್ ವಿರುದ್ಧ ತಂತ್ರ ರೂಪಿಸುವ ಬಗ್ಗೆಯೂ ಚರ್ಚೆ ನಡೆಯಲಿದೆ.
ಮಹದಾಯಿ ಚರ್ಚೆ: ಮಹದಾಯಿ ನದಿ ನೀರು ವಿವಾದ ಕುರಿತಂತೆಯೂ ಸಭೆಯಲ್ಲಿ ಚರ್ಚೆ ನಡೆಯಲಿದೆ ಎಂದು ತಿಳಿದುಬಂದಿದೆ. ಚುನಾವಣೆಗೂ ಮುನ್ನ ವಿವಾದ ಬಗೆದರೆ ಪಕ್ಷಕ್ಕೆ ಅನುಕೂಲವಾಗುವ ಸಾಧ್ಯತೆ ಬಗ್ಗೆಯೂ ಚರ್ಚೆ ನಡೆಯಲಿದೆ. ಉಪಚುನಾವಣೆ ಹಿನ್ನೆಲೆಯಲ್ಲಿ ಸಂಸದರಾದ ಯಡಿಯೂರಪ್ಪ, ಶೋಭಾ ಕರಂದ್ಲಾಜೆ ಮತ್ತು ಶ್ರೀರಾಮುಲು ಸಭೆಯಲ್ಲಿ ಭಾಗವಹಿಸುತ್ತಿಲ್ಲ.