ಚಿನ್ನಮ್ಮ ಶಶಿಕಲಾ ಪಟ್ಟಾಭಿಷೇಕಕ್ಕೆ ನರೇಂದ್ರ ಮೋದಿ ಅಡ್ಡಗಾಲು ಹಾಕಿದರಾ?!

ಮಂಗಳವಾರ, 7 ಫೆಬ್ರವರಿ 2017 (09:14 IST)
ಚೆನ್ನೈ: ಅಮ್ಮನ ಉತ್ತರಾಧಿಕಾರಿಯಾಗಿ ತಮಿಳುನಾಡು ಸಿಎಂ ಆಗುವ ಚಿನ್ನಮ್ಮ ಶಶಿಕಲಾ ನಟರಾಜನ್ ಕನಸು ಭಗ್ನಗೊಂಡಿದೆ.  ನಿಗದಿಯಂತೆ ಗುರುವಾರ ಶಶಿಕಲಾ ತಮಿಳುನಾಡು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಬೇಕಿತ್ತು. ಅದನ್ನೀಗ ರದ್ದುಗೊಳಿಸಲಾಗಿದೆ.


ಶಶಿಕಲಾ ವಿರುದ್ಧ ಇನ್ನೊಂದು ವಾರದಲ್ಲಿ ಅಕ್ರಮ ಆಸ್ಥಿ ಪ್ರಕರಣದ ತೀರ್ಪು ಸುಪ್ರೀಂ ಕೋರ್ಟ್ ನಿಂದ ಹೊರ ಬೀಳುವ ಸಾಧ್ಯತೆಯಿದೆ. ಈ ಹಿನ್ನಲೆಯಲ್ಲಿ ತಮಿಳುನಾಡು ರಾಜ್ಯಪಾಲ ವಿದ್ಯಾಸಾಗರ್ ಸಂವಿಧಾನದ ಸಾಧಕ ಬಾಧಕಗಳು ಕುರಿತು ಕಾನೂನು ತಜ್ಞರನ್ನು ಸಂಪರ್ಕಿಸಿದ್ದು ಪ್ರಮಾಣ ವಚನ ಸ್ವೀಕರಿಸಲು ಹಿಂದೇಟು ಹಾಕಿದ್ದಾರೆ.

ಇನ್ನೊಂದೆಡೆ ಶಶಿಕಲಾ ತಮಿಳುನಾಡು ಸಿಎಂ ಪಟ್ಟಕ್ಕೇರುವುದನ್ನು ವಿರೋಧಿಸಿ ವಿರೋಧ ಪಕ್ಷದ ನಾಯಕ ಸ್ಟಾಲಿನ್ ಪ್ರಧಾನಿ, ಗೃಹಸಚಿವರಿಗೆ ದೂರು ನೀಡಿದ್ದರು ಎನ್ನಲಾಗಿದೆ. ಈ ಹಿನ್ನಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಚಿನ್ನಮ್ಮನಿಗೆ ಶಾಕ್ ನೀಡಿದ್ದಾರೆಂಬ ಗುಮಾನಿ ದಟ್ಟವಾಗಿದೆ.

ಶಶಿಕಲಾ ಇದುವರೆಗೆ ಚುನಾವಣೆಗೆ ಸ್ಪರ್ಧಿಸಿಲ್ಲ.ಅಲ್ಲದೆ ಅವರ ಮೇಲೆ ಅಕ್ರಮ ಆಸ್ಥಿ ಪ್ರಕರಣ ತನಿಖೆಯಾಗುತ್ತಿದೆ. ಈ ಎಲ್ಲಾ ವ್ಯಾಪಕ ವಿರೋಧದ ಹಿನ್ನಲೆಯಲ್ಲಿ ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ತಡೆಯೊಡ್ಡಬೇಕೆಂದು ಸುಪ್ರೀಂ ಕೋರ್ಟ್ ನಲ್ಲೂ ಅರ್ಜಿ ಸಲ್ಲಿಕೆಯಾಗಿದೆ. ಈ ಎಲ್ಲಾ ಹಿನ್ನಲೆಯಲ್ಲಿ ಶಶಿಕಲಾ ಈ ವಾರವೇ ಸಿಎಂ ಆಗುವ ಕನಸು ಭಗ್ನಗೊಂಡಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ