ಸ್ವಾತಂತ್ರ್ಯೋತ್ತರ ಅತಿ ಹೆಚ್ಚು ಟೀಕೆಗೊಳಗಾದ ವ್ಯಕ್ತಿ ಇವರಂತೆ!

ಶನಿವಾರ, 5 ನವೆಂಬರ್ 2016 (13:51 IST)
ಸ್ವಾತಂತ್ರ್ಯೋತ್ತರದಲ್ಲಿ ಅತಿ ಹೆಚ್ಚು ಕಟು ಟೀಕೆಗೊಳಗಾದ ವ್ಯಕ್ತಿ ಮೋದಿ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹೇಳಿದ್ದಾರೆ. 
ಗೋವಾದ ಕಾಣಕೋಣದಲ್ಲಿ ಇಂಡಿಯಾ ಐಡಿಯಾ ಕಾನ್ಕ್ಲೇವ್ 2016 ಉದ್ಘಾಟನಾ ಸಮಾರಂಭದಲ್ಲಿ ಮಾತನಾಡುತ್ತಿದ್ದ ಅವರು, ಸ್ವಾತಂತ್ರ್ಯದ ನಂತರ ಅತಿ ಹೆಚ್ಚು ಕಟು ಟೀಕೆಗಳ ಯಾವುದಾದರೂ ವ್ಯಕ್ತಿಯ ಮೇಲೆ ಬಂದಿದೆ ಎಂದಾದರೆ ಅದು ಪ್ರಧಾನಿ ಮೋದಿ ಅವರ ಮೇಲೆ. ಆದರೆ ದೇಶವನ್ನು ಗುರಿಯಾಗಿಸಿಕೊಂಡು ಮಾಡಿದ ಟೀಕೆಗಳು ಅಭಿವ್ಯಕ್ತಿ ಸ್ವಾತಂತ್ರ್ಯ ಎನ್ನಿಸಿಕೊಳ್ಳುವುದಿಲ್ಲ ಎಂದಿದ್ದಾರೆ.
 
ಟೀಕೆಗಳಿಗೆ ಸ್ವಾಗತ. ಅದನ್ನು ಎಲ್ಲರೂ ಸಹಿಸಿಕೊಳ್ಳಬೇಕು. ಮೋದಿಯನ್ನು ಟೀಕಿಸುತ್ತ ಒಂದು ಹೆಜ್ಜೆ ಮುಂದೆ ಹೋಗಿ ದೇಶದ ವಿರುದ್ಧ ಟೀಕೆಗಿಳಿದರೆ? ಕ್ಷಮಿಸಿರಿ, ಇದು ಅಭಿವ್ಯಕ್ತಿಯ ನಿಜವಾದ ಸ್ವಾತಂತ್ರ್ಯವಲ್ಲ ಎಂದಿದ್ದಾರೆ.  
 
ಅಸಮ್ಮತಿ ಪ್ರಜಾಪ್ರಭುತ್ವದ ಭಾಗ, ಆದರೆ ಇದು ಅನುಚಿತ ಮಾರ್ಗದಲ್ಲಿ ಮುಂದುವರೆದರೆ ಅಲ್ಲಿ ಅಭಿವೃದ್ಧಿ ಎಂಬುದು ಇರುವುದಿಲ್ಲವೆಂದಿದ್ದಾರೆ ಶಾ. 
 
ಜನರು ಇದನ್ನು ಅರ್ಥಮಾಡಿಕೊಳ್ಳದೇ ಹೋದರೆ ಪ್ರಜಾಪ್ರಭುತ್ವದ ಉದ್ದೇಶ ನಾಶವಾಗಿ ಹೋಗುತ್ತದೆ. ವಿಕಾಸ ಸಮಾಜದ ಕೊನೆಯ ವ್ಯಕ್ತಿಯನ್ನು ತಲುಪುವುದೇ ಲೋಕತಂತ್ರದ ಉದ್ದೇಶ ಎಂದಿದ್ದಾರೆ ಅವರು. 
 
ಸ್ವಾತಂತ್ರ್ಯ ಪಡೆದ 68 ವರ್ಷಗಳ ಬಳಿಕ ಮೋದಿ ಸರ್ಕಾರ ಆಸ್ತಿತ್ವಕ್ಕೆ ಬಂದ ಮೇಲೆಯೆ ಅತ್ಯುತ್ತಮ ಆಡಳಿತವನ್ನು ಕಂಡಿತು ಎಂದು ಶಾ ತಮ್ಮ ಪಕ್ಷದ ನೇತೃತ್ವದ ಸರ್ಕಾರವನ್ನು ಹೊಗಳಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

ವೆಬ್ದುನಿಯಾವನ್ನು ಓದಿ