ನಿಮಗಿದು ಗೊತ್ತೇ..? ಸ್ವತಃ ನರೇಂದ್ರಮೋದಿ ಜಿಎಸ್`ಟಿ ವಿರೋಧಿಸಿದ್ದರು..!

ಶುಕ್ರವಾರ, 30 ಜೂನ್ 2017 (18:19 IST)
ಪ್ರಧಾನಮಂತ್ರಿ ನರೇಂದ್ರಮೋದಿ ನೋಟ್ ಬ್ಯಾನ್ ಜಿಎಸ್`ಟಿ ಮೂಲಕ ಮತ್ತೊಂದು ಕ್ರಾಂತಿಕಾರಕ ಹೆಜ್ಜೆ ಇಡಲು ಮುಂದಾಗಿದ್ದಾರೆ. ಒಂದು ದೇಶ ಒಂದೇ ತೆರಿಗೆ ಘೋಷವಾಕ್ಯದಡಿ ಜಾರಿಗೆ ಬರುತ್ತಿರುವ ಜಿಎಸ್`ಟಿಗೆ ಒಂದು ಕಾಲದಲ್ಲಿ ಸ್ವತಃ ನರೇಂದ್ರಮೋದಿ ವಿರೋಧ ವ್ಯಕ್ತಪಡಿಸಿದ್ದರು. 

ನರೇಂದ್ರಮೋದಿ ಗುಜರಾತ್ ಸಿಎಂ ಆಗಿದ್ದಾಗ ಯುಪಿಎಸರ್ಕಾರ 

ಪ್ರಸ್ತಾಪಿಸಿದ್ದ ಜಿಎಸ್`ಟಿ ಉದ್ದೇಶಿಸಿ ಮಾತನಾಡಿದ್ದ ನರೇಂದ್ರಮೋದಿ ಐಟಿ ಇನ್ಪ್ರಾಸ್ಟ್ರಕ್ಚರ್ ವೃದ್ಧಿಯಾಗದ ಹೊರತು ದೇಶದಲ್ಲಿ ಜಿಎಸ್`ಟಿ ಜಾರಿ ಸಾಧ್ಯವೇ ಇಲ್ಲ ಎಂದಿದ್ದರು. ಇದೀಗ, ಈ ವಿಡಿಯೋವನ್ನ ತನ್ನ ಟ್ವಿಟ್ಟರ್ ಪೇಜ್`ನಲ್ಲಿ ಪೋಸ್ಟ್ ಮಾಡಿರುವ ಕಾಂಗ್ರೆಸ್, ಮೋದಿಜಿ ಎಷ್ಟು ಬೇಗ ನಿಮ್ಮ ಮಾತುಗಳನ್ನ ಮರೆತುಬಿಟ್ಟಿರಿ ಎಂದು ವ್ಯಂಗ್ಯಮಾಡಿದೆ.

ಇದೇವೇಳೆ, ಇಂದು ಮಧಯರಾತ್ರಿ ಜಿಎಸ್`ಟಿ ಜಾರಿ ಹಿನ್ನೆಲೆಯಲ್ಲಿ ನರೇಂದ್ರಮೋದಿ ಕರೆದಿರುವ ಸಭೆಯನ್ನ ಕಾಂಗ್ರೆಸ್ ಬಹಿಷ್ಕರಿಸಿದೆ.
 

 ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ


 

 

This is what Modi ji & the BJP really think of GST #GSTTamasha pic.twitter.com/WyXMEEwOv5

— INC India (@INCIndia) June 30, 2017

ವೆಬ್ದುನಿಯಾವನ್ನು ಓದಿ