ಸಿನಿಮೀಯ ರೀತಿಯಲ್ಲಿ ಚಿರತೆ ದಾಳಿಯಿಂದ ಪಾರಾದ ಬೈಕ್ ಸವಾರ, ಮೈ ಝುಮ್‌ ಅನ್ನಿಸುವ ವಿಡಿಯೋ

Sampriya

ಭಾನುವಾರ, 27 ಜುಲೈ 2025 (12:08 IST)
Photo Credit X
ಬೈಕ್ ಸವಾರನೊಬ್ಬ ಚಿರತೆ ದಾಳಿಯಿಂದ ಜೆಸ್ಟ್ ಎಸ್ಕೇಪ್ ಆಗಿರುವ ವಿಡಿಯೋವೊಂದು ಸಾಮಾಜಿಕ ಜಾಲ‌ತಾಣದಲ್ಲಿ ವೈರಲ್ ಆಗಿದೆ. ಈ ಘಟನೆ ಅಲಿಪಿರಿಯ ಝೂ ಪಾರ್ಕ್ ರಸ್ತೆಯಲ್ಲಿ ನಡೆದಿದೆ. 

ಆಂಧ್ರಪ್ರದೇಶದ ತಿರುಪತಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಆಗಾಗ ಚಿರತೆಗಳು ಪ್ರತ್ಯಕ್ಷವಾಗುತ್ತಿರುವ ಘಟನೆಗಳು ವರದಿಯಾಗುತ್ತಲೇ ಇದೆ. ಆದರೆ ಇದೀಗ ಚಿರತೆ ದಾಳಿಯಿಂದ ಸವಾರನೊಬ್ಬ ಜೆಸ್ಟ್ ಎಸ್ಕೇಪ್ ಆಗಿದ್ದಾನೆ. 

ಶುಕ್ರವಾರ ರಾತ್ರಿ 7 ಗಂಟೆ ಸುಮಾರಿಗೆ ಅಲಿಪಿರಿಯ ಝೂ ಪಾರ್ಕ್ ರಸ್ತೆಯಲ್ಲಿ ಈ ಘಟನೆ ನಡೆದಿದ್ದು, ವೇಗವಾಗಿ ಬರುತ್ತಿದ್ದ ಬೈಕ್ ಮೇಲೆ ಏಕಾಏಕಿ ಚಿರತೆ ಎಗರಿದೆ. ಆದರೆ ಬೈಕ್ ವೇಗವಾಗಿ ಇದ್ದಿದ್ದರಿಂದ ಸವಾರ ಪ್ರಾಣಪಾಯದಿಂದ ಪಾರಾಗಿದ್ದಾನೆ. 

ಈ ಭಯಾನಕ ಘಟನೆಯನ್ನು ಕಾರಿನ ಹಿಂದೆ ಹಿಂಬಾಲಿಸಿದ ಡ್ಯಾಶ್‌ಕ್ಯಾಮ್‌ನಿಂದ ಸೆರೆಹಿಡಿಯಲಾಗಿದೆ ಮತ್ತು ಈ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಈ ಕಾಡು ಪ್ರಾಣಿಗಳಿಂದ ತಕ್ಷಣದ ಅಪಾಯವನ್ನು ಎತ್ತಿ ತೋರಿಸುತ್ತದೆ.

ಅದೇ ರಾತ್ರಿ, ಮಧ್ಯರಾತ್ರಿ, ಅರವಿಂದ್ ಕಣ್ಣಿನ ಆಸ್ಪತ್ರೆ ಬಳಿ ಚಿರತೆ ಮತ್ತೆ ಸ್ಥಳೀಯರಿಗೆ ಕಾಣಿಸಿಕೊಂಡಿದ್ದು, ನಿವಾಸಿಗಳ ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ.

ಇದೇ ಪ್ರದೇಶದಲ್ಲೇ ಮೂರು ಚಿರತೆಗಳು ಇರುವ ಸಾಧ್ಯತೆಯಿದ್ದು, ಅವರ ಚಲನವಲನಗಳನ್ನು ಮೇಲ್ವಿಚಾರಣೆ ಮಾಡಲು ಮತ್ತು ಸೆರೆಹಿಡಿಯಲು ಅನುಕೂಲವಾಗುವಂತೆ, 14 ಟ್ರ್ಯಾಪ್ ಕ್ಯಾಮೆರಾಗಳು ಮತ್ತು ಬೆಟ್ ಸ್ಟೇಷನ್‌ಗಳನ್ನು ಮೂರು ವಿಭಿನ್ನ ಸ್ಥಳಗಳಲ್ಲಿ ಕಾರ್ಯತಂತ್ರವಾಗಿ ಇರಿಸಲಾಗಿದೆ.

A hair-raising video has emerged from #Tirupati in #AndhraPradesh, where a leopard has tried to attack a person riding a moving bike. This incident happened on Tirupati Zoo Park Road at around 7:24 pm.
1/2 pic.twitter.com/50mTSoDXm0

— Siraj Noorani (@sirajnoorani) July 26, 2025

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ