ತಮ್ಮ ಸಂಪುಟ ಸಹೋದ್ಯೋಗಿಗಳಿಗಿಂತ ಮೋದಿ ಬಡವರು

ಶುಕ್ರವಾರ, 26 ಆಗಸ್ಟ್ 2016 (15:35 IST)
ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಸಂಪುಟ ಸಹೋದ್ಯೋಗಿಗಳಿಗಿಂತ ಕಡಿಮೆ ಸಂಪತ್ತು ಹೊಂದಿದ್ದಾರೆ ಎಂಬುದು ಬೆಳಕಿಗೆ ಬಂದಿದೆ. 
 
2015- 16ರ ಹಣಕಾಸು ವರ್ಷದಲ್ಲಿ ತಾವು ಹೊಂದಿರುವ ಆಸ್ತಿಯ ಬಗ್ಗೆ ಅವರು ನೀಡಿರುವ ಆಸ್ತಿವಿವರದ ಪ್ರಕಾರ ತಾವು ಬರೆದಿರುವ ಮತ್ತು ತಮ್ಮ ಬಗ್ಗೆ ಬರೆದಿರುವ ಪುಸ್ತಕಗಳಿಂದ ಅವರು 12.35 ಲಕ್ಷ ಗೌರವ ಧನವನ್ನು ಪಡೆದಿದ್ದಾರೆ. 
 
ಪ್ರಧಾನಿ ಅವರ ಕಚೇರಿಯ ವೆಬ್‌ಸೈಟ್‌ನಿಂದ ಪಡೆದಿರುವ ಮಾಹಿತಿಯ ಪ್ರಕಾರ  ಮಾರ್ಚ್ 2016ರಲ್ಲಿ ಅವರ ಬ್ಯಾಂಕ್ ಉಳಿತಾಯ ಖಾತೆಯಲ್ಲಿರುವ ಹಣ 89,700. ಕಳೆದ ವರ್ಷ ಇದು 4,500 ಇತ್ತು. 
 
ಈ ತಾಜಾ ಅಂಕಿಅಂಶಗಳ ಆಧಾರದ ಮೇಲೆ ಹೇಳುವುದಾದರೆ ಮೋದಿ ಅವರು ತಮ್ಮ ಸಂಪುಟದ ಹೆಚ್ಚಿನ ಸಹೋದ್ಯೋಗಿಗಳಿಗಿಂತ ಬಡವರಾಗಿದ್ದಾರೆ. 
 
ಪ್ರಧಾನಿ ಮೋದಿ ಆಸ್ತಿಪಾಸ್ತಿಗಳ ವಿವರ ಇಂತಿದೆ: 
 
ಮೋದಿ ಅವರು ಗಾಂಧಿನಗರದಲ್ಲಿನ ಬ್ಯಾಂಕ್‌ ಒಂದರಲ್ಲಿ ಹೊಂದಿರುವ ಉಳಿತಾಯ ಖಾತೆಯಲ್ಲಿ 2.10 ಲಕ್ಷ ರೂಪಾಯಿ, ಬ್ಯಾಂಕ್‌ನಲ್ಲಿ ಸ್ಥಿರ ಠೇವಣಿ 50 ಲಕ್ಷವನ್ನು ಹೊಂದಿದ್ದಾರೆ. 
 
ಅವರ ಬಳಿ ನಾಲ್ಕು ಚಿನ್ನದ ಉಂಗುರಗಳಿದ್ದು ಅವುಗಳ ಒಟ್ಟು ಮೌಲ್ಯ 1,27 ಲಕ್ಷ.  ಅವರು ಪುಸ್ತಕಗಳಿಂದ ಪಡೆಯುವ ಗೌರವಧನವನ್ನೆಲ್ಲ ಇದಕ್ಕೆ ಸೇರಿಸಿದರೆ ಅವರ ಬಳಿ ಇರುವ ಚರಾಸ್ತಿ 73.36 ಲಕ್ಷ.
 
ಅವರು ಹೊಂದಿರುವ ಏಕೈಕ ಸ್ಥಿರಾಸ್ತಿ ಎಂದರೆ ಗಾಂಧೀನಗರದಲ್ಲಿರುವ ಒಂದು ಕೋಟಿ ರೂಪಾಯಿ ಮೌಲ್ಯದ ಮನೆ.
 
ಗಮನಾರ್ಹ ವಿಷಯವೆಂದರೆ ಪ್ರಧಾನಿ ಮೋದಿ ಯಾವುದೇ ಕೃಷಿ ಭೂಮಿ, ಕೃಷಿಯೇತರ ಭೂಮಿ ಅಥವಾ ವಾಣಿಜ್ಯ ಕಟ್ಟಡಗಳನ್ನು ಹೊಂದಿಲ್ಲ.
 
ಹಣಕಾಸು ಸಚಿವ ಅರುಣ್ ಜೇಟ್ಲಿ, ವಿದೇಶಾಂಗ ಸಚಿವ ಸುಷ್ಮಾ ಸ್ವರಾಜ್, ಸದಾನಂದ ಗೌಡ, ರಾಮ್ ವಿಲಾಸ್ ಪಾಸ್ವಾನ್, ಮೇನಕಾಗಾಂಧಿ, ಪ್ರಕಾಶ್ ಜಾವ್ಡೇಕರ್, ನಗರಾಭಿವೃದ್ಧಿ ಸಚಿವ ವೆಂಕಯ್ಯ ನಾಯ್ಡು  ಅವರ ಆಸ್ತಿವಿವರಗಳು ಪ್ರಧಾನಿ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ.
 

ವೆಬ್ದುನಿಯಾವನ್ನು ಓದಿ