ಪರಿವಾರವಾದಿಗಳ ಚರಿತ್ರಯೆಲ್ಲಿ ಜೂಟ್ ಮತ್ತು ಲೂಟ್ ಸಾಮಾನ್ಯವಾಗಿದೆ ಎಂದು ನುಡಿದ ಪ್ರಧಾನಿ ಮೋದಿ, ತೆಲಂಗಾಣದಲ್ಲಿ ಟಿಆರ್‌ಎಸ್ ಬದಲಾಗಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿರವುದರಿಂದ ಏನೂ ಬದಲಾಗಿಲ್ಲ. ಇಬ್ಬರೂ ಸಹ ಒಂದೇ ಮೂಲದಿಂದ ಬಂದವರಾಗಿದ್ದಾರೆ ಎಂದು ಆರೋಪಿಸಿದರು.
ಟಿಆರ್‌ಎಸ್ ಪಕ್ಷವು ಕಾಲೇಶ್ವರ ಹಗರಣ ನಡೆಸಿತು. ಕಾಂಗ್ರೆಸ್ ಅದರ ತನಿಖೆ ನಡೆಸದೆ ಬಾಯಿಮುಚ್ಚಿಕೊಂಡು ಕುಳಿತಿದೆ ಎಂದು ಆರೋಪಿಸಿದ ಪ್ರಧಾನಿ ಮೋದಿ, ನೀವೂ ಸರಿ ನಾವೂ ಸರಿ. ನೀವೂ ತಿಂದಿದ್ದೀರಿ ನಾವೂ ತಿನ್ನುತ್ತೇವೆ ಎಂಬುದು ಕಾಂಗ್ರೆಸ್ ಮತ್ತು ಟಿಆರ್‌ಎಸ್ ನಡುವಿನ ಸಮನ್ವಯ ತರ್ಕ ಎಂದು ಟೀಕಿಸಿದರು. ಭಾರತದ 140 ಕೋಟಿ ಜನರೂ ಸಹ ನನ್ನ ಕುಟುಂಬಸ್ಥರಾಗಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ತೆಲಂಗಾಣದಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಕುಟುಂಬವಾದಿಗಳ ಚಹರೆ ಬೇರೆಯಾಗಿದ್ದರೂ ಚರಿತ್ರೆ ಒಂದೇ ಎಂದು ಟೀಕಿಸಿದರು.