ನವದೆಹಲಿ :ಅಮೃತ್ ಭಾರತ್ ಸ್ಟೇಷನ್ ಯೋಜನೆಯಡಿ ದೇಶಾದ್ಯಂತ 27 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳನ್ನು ಸಂಪರ್ಕಿಸುವ ಕಾಮಗಾರಿಗೆ 19 ಸಾವಿರ ಕೋಟಿ ರೂ. ಮಿಸಲಾಗಿರಿಸಲಾಗಿದೆ. ವಿವಿಧ ಪ್ರಸಿದ್ದ ನಗರಗಳ ಕೇಂದ್ರ ಭಾಗದಲ್ಲಿ ಈ ಯೋಜನೆಯ ರೈಲು ನಿಲ್ದಾಣಗಳು ಸಿದ್ದಗೊಳ್ಳಲಿದೆ. 553 ರೈಲು ನಿಲ್ದಾಣಗಳನ್ನು ಆಧುನಿಕ ರೀತಿಯಲ್ಲಿ ಮೇಲ್ದರ್ಜೆಗೇರಿಸುವ ಕಾಮಗಾರಿ ಸೇರಿದಂತೆ ಸುಮಾರು 41 ಸಾವಿರ ಕೋಟಿ ರೂ. ವೆಚ್ಚದ ವಿವಿಧ ಯೋಜನೆಗಳಿಗೆ ಪ್ರಧಾನಿ ನರೇಂದ್ರ ಮೋದಿ ಸೋಮವಾರ ಚಾಲನೆ ನೀಡಲಿದ್ದಾರೆ. ವಿಡಿಯೋ ಕಾನ್ಫರೆನ್ಸ್ ಮೂಲಕ ಚಾಲನೆ ನೀಡಲಿರುವ ಈ ಯೋಜನೆಗಳಲ್ಲಿ ಸುಮಾರು 2000 ಕಾಮಗಾರಿ ಕಾರ್ಯಗಳೂ ಸೇರಿವೆ.
ಆದುನಿಕ ರೈಲು ನಿಲ್ದಾಣಗಳಲ್ಲಿ ಮಕ್ಕಳ ಆಟದ ಸ್ಥಳ, ಕಿಯೋಸ್ಕ್ ಯಂತ್ರಗಳು, ಫುಡ್ ಕೋರ್ಟ್ ಗಳೂ ಸಹ ಇರಲಿವೆ. ಜೊತೆಗೆ ಈ ರೈಲು ನಿಲ್ದಾನಗಳನ್ನು ಪರಿಸರ ಸ್ನೇಹಿ ನಿಲ್ದಾಣಗಳನ್ನಾಗಿ ನಿರ್ಮಿಸಲಾಗುತ್ತಿದೆ.