ಮತ್ತೊಂದು ನೋಟ್ ಬ್ಯಾನ್ ಮಾಡ್ತಾರಾ ಮೋದಿ..? 2000 ರೂ. ನೋಟು ತೆರೆಮರೆಗೆ ಸರಿಯುತ್ತಾ..?
ಶುಕ್ರವಾರ, 21 ಜುಲೈ 2017 (09:46 IST)
ನೋಟ್ ಬ್ಯಾನ್ ಬಳಿಕ ಹಣ ಬದಲಾವಣೆಗೆ ಪರದಾಡಿದ್ದನ್ನ ದೇಶದ ಜನ ಇನ್ನೂ ಮರೆತಿಲ್ಲ. ಅದಾಗಲೇ ಮತ್ತೊಂದು ನೋಟ್ ಬ್ಯಾನ್`ಗೆ ಪ್ರಧಾನ ಮಂತ್ರಿ ನರೇಂದ್ರಮೋದಿ ಸಿದ್ಧತೆ ನಡೆಸಿದ್ದಾರಾ..? ಎಂಬ ಅನುಮಾನ ಮೂಡತೊಡಗಿದೆ.
ಹೌದು, ಕಪ್ಪುಹಣದ ಬೇಟೆಯಾಡಲು ನರೇಂದ್ರ ಮೋದಿ ಸೂಚನೆ ಮೇರೆಗೆ 2000ಿ ರೂ. ನೋಟುಗಳನ್ನ ಚಲಾವಣೆಗೆ ತರಲಾಗಿತ್ತು. ಇದರಿಂದ ನೋಟು ಬದಲಾವಣೆ ಸರಳವಾಗಿತ್ತು. ಆದರೆ, ದಿನನಿತ್ಯದ ವ್ಯವಹಾರಕ್ಕೆ 2000 ರೂ. ನೋಟು ತೊಡಕಾಗಿರುವುದು ಸುಳ್ಳಲ್ಲ. ಹಾಲು, ತರಕಾರಿ, ದಿನಸಿ ತರಲು ಹೋದಾಗ ಚಿಲ್ಲರೆ ಸಿಗದೇ ಜನ ಪರಿತಪಿಸುತ್ತಿದ್ಧಾರೆ. ಇವೇ ಮುಂತಾದ ಕಾರಣಗಳಿಗಾಗಿ 2000 ರೂ. ನೋಟಿಗೆ ಗುಡ್ ಬೈ ಹೇಳಲು ಮೋದಿ ಚಿಂತಿಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಈ ಮಾತಿಗೆ ಇಂಬು ನೀಡುವಂತೆ ಹಲವೆಡೆ 2000 ರೂ. ನೋಟುಗಳು ಸಹ ಕಡಿಮೆಯಾಗಿವೆ. ಬ್ಯಾಂಕ್ ಮತ್ತು ಎಟಿಎಂಗಳಲ್ಲೂ 2000 ರೂ. ನೋಟು ಅತ್ಯಂತ ಕಡಿಮೆಯಾಗಿ 500 ರೂ. ನೋಟು ಸಿಗುತ್ತಿವೆ. 2000 ರೂ. ನೋಟು ಹಿಂಪಡೆದು 500 ಮತ್ತು 200 ರೂ. ನೋಟುಗಳನ್ನ ಚಲಾವಣೆಗೆ ಬಿಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಈಗಾಗಲೇ 200 ರೂ. ನೋಟು ಮುದ್ರಣವಾಗುತ್ತಿರುವ ಬಗ್ಗೆ ಆರ್`ಬಿಐ ಮೂಲಗಳೇ ಮಾಧ್ಯಮಗಳಿಗೆ ಮಾಹಿ ನೀಡಿರುವುದನ್ನ ಇಲ್ಲಿ ಸ್ಮರಿಸಬಹುದು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ