ಚಂದ್ರಯಾನ 2 ವಿಕ್ರಮ್ ಲ್ಯಾಂಡರ್ ಕತೆ ಏನಾಯಿತು? ಫೋಟೋ ರವಾನಿಸಿದ ನಾಸಾ

ಶುಕ್ರವಾರ, 27 ಸೆಪ್ಟಂಬರ್ 2019 (09:16 IST)
ನವದೆಹಲಿ: ಇಸ್ರೋ ಸಂಪರ್ಕದಿಂದ ಕೊನೆಯ ಕ್ಷಣದಲ್ಲಿ ಸಂಪರ್ಕ ಕಡಿದುಕೊಂಡಿದ್ದ ಚಂದ್ರಯಾನ 2 ವಿಕ್ರಮ್‍ ಲ್ಯಾಂಡರ್ ಕತೆ ಏನಾಯಿತು ಎಂಬ ಬಗ್ಗೆ ಇದೀಗ ಅಮೆರಿಕಾ ಬಾಹ್ಯಾಕಾಶ ಅಧ್ಯಯನ ಸಂಸ್ಥೆ ನಾಸಾ ಬಹಿರಂಗಪಡಿಸಿದೆ.


ವಿಕ್ರಮ್ ಲ್ಯಾಂಡರ್ ಪತ್ತೆಗೆ ನಾಸಾ ಇಸ್ರೋ ಜತೆ ಕೈಜೋಡಿಸುವುದಾಗಿ ಹೇಳಿತ್ತು. ಅದರಂತೆ ಈಗ ವಿಕ್ರಮ್ ಲ್ಯಾಂಡರ್ ಕೊನೆಯ ಕ್ಷಣದಲ್ಲಿ ಏನಾಯಿತು ಎಂಬ ಬಗ್ಗೆ ಫೋಟೋ ಸಮೇತ ಸಾಕ್ಷಿ ಕಳುಹಿಸಿದೆ.

ವಿಕ್ರಮ್ ಲ್ಯಾಂಡರ್ ಕೊನೆಯ ಕ್ಷಣದಲ್ಲಿ ಹಾರ್ಡ್ ಲ್ಯಾಂಡಿಂಗ್ ಆಗಿದೆ ಎಂದಿರುವ ನಾಸಾ ತನ್ನ ಲೂನಾರ್ ಆರ್ಬಿಟರ್ ಕ್ಯಾಮರಾ ಮೂಲಕ ಸೆರೆ ಹಿಡಿದ ಫೋಟೋಗಳನ್ನು ರವಾನಿಸಿದೆ. ವಿಕ್ರಮ್ ಲ್ಯಾಂಡರ್ ಇಳಿಯಬೇಕಾಗಿದ್ದ ಉದ್ದೇಶಿತ ಸ್ಥಳದಲ್ಲಿ ಹಾರ್ಡ್ ಲ್ಯಾಂಡಿಂಗ್ ಆಗಿರುವುದಕ್ಕೆ ಕುರುಹಾಗಿ ಕುಳಿಗಳು ಉಂಟಾಗಿರುವುದನ್ನು ಪತ್ತೆ ಮಾಡಿದೆ. ಈ ಬಗ್ಗೆ ನಾಸಾ ಹೆಚ್ಚಿನ  ಅಧ‍್ಯಯನ ನಡೆಸುತ್ತಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ