4 ಕೋಟಿ ರೂ. ಇನ್ಸೂರೆನ್ಸ್ ಹಣಕ್ಕಾಗಿ ಬೃಹನ್ನಾಟಕ.. ಬದುಕಿದ್ದರೂ ಸತ್ತಿದ್ದೇನೆಂದು ತೋರಿಸಿದ್ದ..!

ಶುಕ್ರವಾರ, 30 ಜೂನ್ 2017 (12:25 IST)
ಹಣ ಹೆಣವನ್ನೂ ಬಾಯಿ ಬಿಡುವಂತೆ ಮಾಡುತ್ತದೆ ಎಂಬುದು ಗಾದೆ ಮಾತು. ಹಣ ಮನುಷ್ಯರ ಕೈಯಲ್ಲಿ ಎಂಥೆಂಥಾ ಮಾಡಿಸುತ್ತೆ ಎಂಬುದಕ್ಕೆ ಈ ಪ್ರಕರಣ ಸಾಕ್ಷಿ. ಈತನ ರಚಿಸಿರುವ ಪ್ಲ್ಯಾನ್ ನೋಡಿದರೆ ಯಾವುದೇ ಬಾಲಿವುಡ್ ಚಿತ್ರಕಥೆಗಾರರಿಗೂ ಕಡಿಮೆ ಇಲ್ಲ.
 

ಹೌದು, ಮತ್ತೊಬ್ಬ ವ್ಯಕ್ತಿಯನ್ನ ಕೊಂದು ತಾನೇ ಅಪಘಾತದಲ್ಲಿ ಸತ್ತಿರುವುದಾಗಿ ತೋರಿಸಿ 4 ಕೋಟಿ ರೂಪಾಯಿ ಇನ್ಶೂರೆನ್ಸ್ ಹಣ ಪಡೆಯಲು ಸಂಚು ರೂಪಿಸಿದ್ದ ಪ್ರಕರಣ ಬಟಾ ಬಯಲಾಗಿದೆ.
.
ರಾಮದಾಸ್ ವಾಘಾ ಎಂಬಾತ ಇನ್ನಿತರ ಮೂವರು ಸಹಚರರ ಜೊತೆ ಸೇರಿಕೊಂಡು ಈ ಪ್ಲ್ಯಾನ್ ಮಾಡಿದ್ದಾನೆ. ಇದಕ್ಕಾಗಿ ಒಬ್ಬ ಹೋಟೆಲ್ ಮಾಣಿಯನ್ನ ಆಯ್ಕೆ ಮಾಡಿಕೊಂಡ ಈ ನಾಲ್ವರು ಅವನನ್ನ ಕೊಂದು, ಮುಖವೂ ಗುರುತು ಸಿಗದಂತೆ ಮಾಡಿ, ರಾಮದಾಸ್ ವಾಘಾಗೆ ಸೇರಿದ ಐಡಿ ಕಾರ್ಡ್, ಎಟಿಎಂ ಕಾರ್ಡ್`ಗಳನ್ನ ಆತನ ಜೇಬಿನಲ್ಲಿಟ್ಟಿರುತ್ತಾರೆ.

ಜೂನ್ 9ರಂದು ನಾಸಿಕ್`ನ ತೃಂಬಕೇಶ್ವರ್ ಬಳಿ ಮೃತದೇಹ ಪತ್ತೆಯಾಗುತ್ತದೆ. ಮೇಲ್ನೊಟಕ್ಕೆ ರಸ್ತೆ ಅಪಘಾತದಲ್ಲಿ ಮೃತಪಟ್ಟಿರುವ ರೀತಿ ಕಾಣುತ್ತದೆ. ಮುಖ ಗುರುತು ಸಿಗದ ಹಿನ್ನೆಲೆಯಲ್ಲಿ ಆತನ ಬಳಿ ಇದ್ದ ಐಡಿ ಕಾರ್ಡ್, ಎಟಿಎಂ ಕಾರ್ಡ್ ಇನ್ನಿತರ ದಾಖಲೆಗಳನ್ನ ನೋಡಿ ಈತ ರಿಯಲ್ ಎಸ್ಟೇಟ್ ಬ್ರೋಕರ್ ರಾಮದಾಸ್ ವಾಘಾ ಎಂದುಕೊಳ್ಳುತ್ತಾರೆ. ಆದರೆ, ಮರಣೋತ್ತರ ವರದಿಯಲ್ಲಿ ಕುತ್ತಿಗೆ ಬಿಗಿದು ಕೊಂದಿರುವುದಾಗಿ ಕಂಡುಬರುತ್ತದೆ.

ಮರಣೋತ್ತರ ವರದಿ ಬಳಿಕ ಪೊಲೀಸರ ತನಿಖೆತ ದಿಕ್ಕೇ ಬದಲಾಗುತ್ತೆ. ಸಾವಿನ ರಹಸ್ಯ ಭೇದಿಸಲು ನಿಂತ ಪೊಲೀಸರು ರಾಮದಾಸ್ ಮನೆಗೆ ಹೋಪಷ್ಟವಾಗಗಿ ವಿಚಾರಿಸಿದಾಗ ಸಂಬಂಧಿಕರ ಉತ್ತರ ಅಸ್ಪಷ್ಟವಾಗಿರುತ್ತೆ. ಬಳಿಕ ಸತ್ತಿರುವ ವ್ಯಕ್ತಿ ಮುಬಾರಕ್ ಚಾಂದ್ ಪಾಷಾ ಎಂದು ಗುರ್ತಿಸಲ್ಪಡುತ್ತೆ. ವಾಘಾ ಸಹಚರರನ್ನ ಹಿಡಿದು ವಿಚಾರಿಸಿದಾಗ ವಿವಿಧ ಿನ್ಶೂರೆನ್ಸ್ ಕಂಪನಿಗಳಿಂದ ಬರಬೇಕಿದ್ದ 4 ಕೋಟಿ ರೂ. ಇನ್ಶೂರೆನ್ಸ್ ಹಣಕ್ಕಾಗಿ ಈ ಕೆಲಸ ಮಾಡಿದ್ಧಾಗಿ ತಿಳಿದುಬರುತ್ತದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ