ಚುನಾವಣಾ ಸಮಾವೇಶದಲ್ಲಿ ಮಾತನಾಡಿ ಗಂಟಲಿಗೆ ಅಪಾಯ ತಂದುಕೊಂಡ ನವಜೋತ್ ಸಿಂಗ್ ಸಿಧು!
28 ದಿನಗಳಲ್ಲಿ 80 ರ್ಯಾಲಿಗಳಲ್ಲಿ ಭಾಗವಹಿಸಿ ಭಾಷಣ ಮಾಡಿರುವ ಸಿಧು ಗಂಟಲಿಗೆ ಇದೀಗ ತೊಂದರೆಯಾಗಿದೆಯಂತೆ. ಇದೀಗ ಗಂಟಲಿನ ಸಮಸ್ಯೆಗೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಹೀಗಾಗಿ ಸದ್ಯಕ್ಕೆ ಭಾಷಣಗಳಿಗೆ ಫುಲ್ ಸ್ಟಾಪ್ ಹಾಕಿರುವ ಸಿಧು ವಿಶ್ರಾಂತಿ ಪಡೆಯುತ್ತಿದ್ದಾರೆ. ಸದ್ಯದಲ್ಲೇ ಸಾರ್ವಜನಿಕ ಕಾರ್ಯಕ್ರಮದಲ್ಲಿ ಭಾಗವಹಿಸಬಹುದು ಎಂಬ ವಿಶ್ವಾಸದಲ್ಲಿ ಸಿಧು ಇದ್ದಾರೆ ಎಂದು ಅವರ ಆಪ್ತ ಮೂಲಗಳಿಂದ ತಿಳಿದುಬಂದಿದೆ.