ಭಯೋತ್ಪಾದನೆಯನ್ನು ನಿಗ್ರಹಿಸುವಲ್ಲಿ ಮೋದಿ ಸರಕಾರ ವಿಫಲ: ಶಿವಸೇನೆ

ಮಂಗಳವಾರ, 26 ಜುಲೈ 2016 (18:39 IST)
ಭಯೋತ್ಪಾದನೆಯನ್ನು ನಿಗ್ರಹಿಸುವಲ್ಲಿ ಮೋದಿ ಸರಕಾರ ವಿಫಲವಾಗಿದೆ. ಮುಂಬರುವ ದಿನಗಳಲ್ಲಿ ತಾನು ಮಾಡಿದ ತಪ್ಪನ್ನು ತಿದ್ದಿಕೊಳ್ಳುತ್ತದೆ ಎನ್ನುವ ವಿಶ್ವಾಸವಿದೆ ಎಂದು ಶಿವಸೇನೆ ಮುಖ್ಯಸ್ಥ ಉದ್ಭವ್ ಠಾಕ್ರೆ ಹೇಳಿದ್ದಾರೆ.
 
ಪ್ರದಾನಿ ಮೋದಿ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಠಾಕ್ರೆ, ದೇಶದ ಜನತೆ ಅಚ್ಚೆ ದಿನ್‌ಗಾಗಿ ಕಾಯುತ್ತಿದ್ದಾರೆ. ಆದರೆ, ಎರಡು ವರ್ಷಗಳು ಕಳೆದರು ಅಚ್ಚೇದಿನ್ ಸುಳಿವಿಲ್ಲ ಎಂದು ಲೇವಡಿ ಮಾಡಿದ್ದಾರೆ.
 
ನಾನು ದೊಡ್ಡ ಬುದ್ದಿವಂತನಲ್ಲ ಅಥವಾ ತಜ್ಞನಲ್ಲ. ಆದರೆ, ಜನರ ನಾಡಿಯನ್ನು ನಾನು ಬಲ್ಲೆ. ಉಗ್ರರ ದಾಳಿಗೆ ತಕ್ಕ ಉತ್ತರ ನೀಡುವುದು ಅಗತ್ಯವಾಗಿದೆ. ಸರಕಾರ ಎರಡು ವರ್ಷಗಳ ಅವಧಿಯನ್ನು ಪೂರ್ಣಗೊಳಿಸಿದೆ. ಉಗ್ರವಾದವನ್ನು ಸದೆಬಡೆಯುವುದು ಅಗತ್ಯವಾಗಿದೆ. ಮೋದಿ ಮುಂಬರುವ ದಿನಗಳಲ್ಲಿ ಸರಕಾರದ ತಪ್ಪುಗಳನ್ನು ತಿದ್ದಿಕೊಳ್ಳುತ್ತಾರೆ ಎನ್ನುವ ವಿಶ್ವಾಸವಿದೆ ಎಂದರು. 
 
ದುರಾದೃಷ್ಟ ಎಂದರೆ ಭಯೋತ್ಪಾದನೆಯನ್ನು ನಿರ್ಮೂಲನೆಗೊಳಿಸುವ ಒಬ್ಬನೇ ಒಬ್ಬ ನಾಯಕ ಭಾರತಕ್ಕೆ ದೊರೆತಿಲ್ಲ. ದೇಶದ ಜನತೆಗೆ ನೀಡಿದ ಭರವಸೆಗಳನ್ನು ಸರಕಾರ ಈಡೇರಿಸಲಿ ಎಂದು ತಿಳಿಸಿದ್ದಾರೆ.
 
ಸಾಮಾನ್ಯ ವ್ಯಕ್ತಿಗೆ ಶೇರುಪೇಟೆ ಅಲ್ಲೋಲ ಕಲ್ಲೋಲವಾದರೆ ಹೆದರುವುದಿಲ್ಲ. ಆದರೆ, ಹಣದುಬ್ಬರ ಹೆಚ್ಚಾದರೆ ಬಡವರಿಗೆ ಹೆದರಿಕೆಯಾಗುತ್ತದೆ. ಇದೀಗ ಹಣದುಬ್ಬರ ಏರಿಕೆಯಾಗುತ್ತಲೇ ಸಾಗಿದೆ. ಸರಕಾರವನ್ನು ಬದಲಿಸಿದರೂ ಯಾವುದೇ ಪ್ರಯೋಜನವಿಲ್ಲ ಎನ್ನುವಂತಾಗಿದೆ ಎಂದು ಶಿವಸೇನೆ ಮುಖ್ಯಸ್ಥ ಉದ್ಭವ್ ಠಾಕ್ರೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ