ತಲೆಮರೆಸಿಕೊಂಡ ಉದ್ಯಮಿ ನೀರವ್ ಮೋದಿ ಭಾರತಕ್ಕೆ ಬಾರದೇ ಇರಲು ಇದುವೇ ಕಾರಣವಂತೆ!

ಭಾನುವಾರ, 2 ಡಿಸೆಂಬರ್ 2018 (09:53 IST)
ನವದೆಹಲಿ: ಪಂಜಾಬ್ ಬ್ಯಾಂಕ್ ಗೆ ಸಾವಿರಾರು ಕೋಟಿ ರೂ. ವಂಚಿಸಿ ವಿದೇಶದಲ್ಲಿ ತಲೆಮರೆಸಿಕೊಂಡಿರುವ ಉದ್ಯಮಿ ನೀರವ್ ಮೋದಿ ಭಾರತಕ್ಕೆ ಮರಳಲು ಸಾಮೂಹಿಕ ಹಲ್ಲೆಯ ಭಯವೇ ಕಾರಣ ಎಂದು ಅವರ ಪರ ವಕೀಲರು ಹೇಳಿದ್ದಾರೆ.


ಮುಂಬೈಯ ಪಿಎಂಎಲ್ಎ ನ್ಯಾಯಾಲಯದಲ್ಲಿ ಜಾರಿ ನಿರ್ದೇಶನಾಲಯ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸುತ್ತಿದ್ದಾಗ ನೀರವ್ ಮೋದಿ ಪರ ವಕೀಲರು ದೇಶದಲ್ಲಿ ಹೆಚ್ಚುತ್ತಿರುವ ಸಾಮೂಹಿಕ ಥಳಿತ ಅಥವಾ ಹಲ್ಲೆ ಪ್ರಕರಣಗಳಿಂದಾಗಿ ನೀರವ್ ಮೋದಿಗೆ ಭಾರತಕ್ಕೆ ಮರಳಲು ಭಯವಾಗುತ್ತಿದೆ ಎಂದಿದ್ದಾರೆ.

ಹೀಗಾಗಿ ಭಾರತದಲ್ಲಿ ವಿಚಾರಣೆ ಎದುರಿಸುವುದು ತನಗೆ ಸುರಕ್ಷಿತವಲ್ಲ ಎಂದು ನೀರವ್ ಮೋದಿ ಮನಗಂಡಿದ್ದಾರೆ ಎಂದು ವಕೀಲರು ಪ್ರತಿಪಾದಿಸಿದ್ದಾರೆ. ಭಾರತದಲ್ಲಿ ತನ್ನ ಮೇಲೆ ಆಕ್ರೋಶವಿದೆ. ಹೀಗಾಗಿ ಇಲ್ಲಿಗೆ ಮರಳಿದರೆ ನನ್ನ ಮೇಲೆ ಥಳಿತ, ಹಲ್ಲೆ ನಡೆಯುವ ಸಾಧ್ಯತೆಯಿದೆ. ಹೀಗಾಗಿ ನಾನು ಭಾರತಕ್ಕೆ ಮರಳಲು ಸಾಧ್ಯವಾಗುತ್ತಿಲ್ಲ ಎಂದು ಜಾರಿ ನಿರ್ದೇಶನಾಲಯಕ್ಕೆ ಈಮೇಲ್ ಮುಖಾಂತರ ನೀರವ್ ಮೋದಿ ವಿನಾಯಿತಿ ಕೋರಿದ್ದಾರೆ ಎನ್ನಲಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ