‘ರಾಮಲೀಲಾ’ ವನ್ನು ಪೋರ್ನ್ ಚಿತ್ರಕ್ಕೆ ಹೋಲಿಸಿದ ನಟ ಪ್ರಕಾಶ್ ರಾಜ್ ಮೇಲೆ ನೆಟ್ಟಿಗರು ಗರಂ
ಈ ವೇಳೆ ನಿರೂಪಕರು ನಿಮಗೆ ವಿರೋಧವಿದ್ದರೆ ಎಲ್ಲದಕ್ಕೂ ಆಕ್ಷೇಪ ವ್ಯಕ್ತಪಡಿಸಬೇಕು ಎಂದಲ್ಲ. ಎಲ್ಲರ ಭಾವನೆಗಳಿಗೂ ಬೆಲೆ ಕೊಡಬೇಕಾಗುತ್ತದೆ’ ಎಂದಿದ್ದಾರೆ. ಇದಕ್ಕೆ ಪ್ರತ್ಯುತ್ತರ ನೀಡುವಾಗ ಪ್ರಕಾಶ್ ರಾಜ್ ರಾಮ್ ಲೀಲಾ ಕಾರ್ಯಕ್ರಮವನ್ನು ಮಕ್ಕಳು ಪೋರ್ನ್ ಸೈಟ್ ನೋಡುವುದಕ್ಕೆ ಹೋಲಿಕೆ ಮಾಡಿದ್ದಾರೆ. ಅಷ್ಟೇ ಅಲ್ಲ, ರಾಮ್ ಲೀಲಾ ಕಾರ್ಯಕ್ರಮಕ್ಕೂ ಪೋರ್ನ್ ಸೈಟ್ ವೀಕ್ಷಣೆಗೂ ಏನು ಸಂಬಂಧ ಎಂದು ಕೇಳಿದ್ದಕ್ಕೆ ಇದು ಅಲ್ಪಸಂಖ್ಯಾತರ ಮನಸ್ಸಿಗೆ ಭಯ ತರುವ ಘಟನೆ ಎಂದಿದ್ದಾರೆ. ಆದರೆ ಪ್ರಕಾಶ್ ರಾಜ್ ರ ಈ ಹೇಳಿಕೆಗೆ ನೆಟ್ಟಿಗರು ಫುಲ್ ಗರಂ ಆಗಿದ್ದು, ರಾಮ ಲೀಲಾವನ್ನು ಪೋರ್ನ್ ಗೆ ಹೋಲಿಸಿದ್ದಕ್ಕೆ ಟೀಕಾ ಪ್ರಹಾರ ನಡೆಸಿದ್ದಾರೆ.