1993 ರ ಬಾಂಬ್ ಬ್ಲಾಸ್ಟ್ ರಹಸ್ಯ ಸದ್ಯದಲ್ಲೇ ಬಹಿರಂಗ ಎಂದ ಪ್ರಧಾನಿ ಮೋದಿ!

ಗುರುವಾರ, 17 ಅಕ್ಟೋಬರ್ 2019 (11:12 IST)
ನವದೆಹಲಿ: 1993 ರಲ್ಲಿ ಮುಂಬೈಯಲ್ಲಿ ನಡೆದಿದ್ದ ಬಾಂಬ್ ಸ್ಪೋಟ ಪ್ರಕರಣ ಭಾರತದ ಇತಿಹಾಸದಲ್ಲೇ ಒಂದು ಕರಾಳ ನೆನಪು. ಈ ಘಟನೆಗೆ ಕಾರಣಕರ್ತರು ಕಾನೂನಿನ ಕೈಗಳಿಂದ ತಪ್ಪಿಸಿಕೊಳ್ಳಲು ಕಾರಣರಾದವರು ಯಾರು ಎಂಬ ಸತ್ಯ ಸದ್ಯದಲ್ಲೇ ಬಹಿರಂಗವಾಗಲಿದೆ ಎಂಬ ಸ್ಪೋಟಕ ಮಾಹಿತಿಯನ್ನು ಪ್ರಧಾನಿ ಮೋದಿ ಹೇಳಿದ್ದಾರೆ.


ಭೂಗತ ಪಾತಕಿ ದಾವೂದ್ ಇಬ್ರಾಹಿಂ ಬಂಟ ಇಕ್ಬಾಲ್ ಮಿರ್ಚಿ ಜತೆ ಅಕ್ರಮ ಭೂ ವ್ಯವಹಾರ ನಂಟು ಹೊಂದಿದ ಆರೋಪದಲ್ಲಿ ಎನ್ ಸಿಪಿ ನಾಯಕ ಪ್ರಫುಲ್ ಪಟೇಲ್ ಗೆ ಇಡಿ ಇಲಾಖೆ ಸಮನ್ಸ್ ಜಾರಿ ಮಾಡಿದ ಬೆನ್ನಲ್ಲೇ ಪ್ರಧಾನಿ ಮೋದಿ ಈ ಹೇಳಿಕೆ ನೀಡಿದ್ದಾರೆ.

ಮಹಾರಾಷ್ಟ್ರದ ಚುನಾವಣಾ ರ್ಯಾಲಿಯೊಂದರಲ್ಲಿ ಮಾತನಾಡಿದ ಪ್ರಧಾನಿ ಮೋದಿ 1993 ರ ಸರಣಿ ಬಾಂಬ್ ಬ್ಲಾಸ್ಟ್ ಆದ ಮೇಲೆ ಕುಕೃತ್ಯದ ಮಾಸ್ಟರ್ ಮೈಂಡ್ ದಾವೂದ್ ಇಬ್ರಾಹಿಂ ಸಹಚರ ಟೈಗರ್ ಮೆನನ್ ಪಾಕಿಸ್ತಾನಕ್ಕೆ ತೆರಳಿ ತಲೆಮರೆಸಿಕೊಂಡಿದ್ದ. ಆವತ್ತು ಆತನಿಗೆ ಆಶ್ರಯ ಕೊಟ್ಟಿದ್ದು ಯಾರು? ಆತ ಪಾಕಿಸ್ತಾನಕ್ಕೆ ಓಡಿ ತಲೆಮರೆಸಿಕೊಳ್ಳಲು ಸಹಾಯ ಮಾಡಿದ್ದು ಹೇಗೆ ಎಂಬುದು ಸದ್ಯದಲ್ಲೇ ಬಹಿರಂಗವಾಗಲಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ