ಮುಖ್ಯಮಂತ್ರಿಯಾಗುವ ಬಯಕೆ ನನಗಿಲ್ಲ: ಶಿವಪಾಲ್ ಯಾದವ್

ಶನಿವಾರ, 29 ಅಕ್ಟೋಬರ್ 2016 (09:59 IST)
ಮುಖ್ಯಮಂತ್ರಿ ಸ್ಥಾನ ಅಲಂಕರಿಸುವ ಬಯಕೆ ನನಗಿಲ್ಲ. ಸಮಾಜವಾದಿ ಪಕ್ಷದ ಮುಖ್ಯಸ್ಥ ಮುಲಾಯಂ ಸಿಂಗ್ ಯಾದವ್ ಅವರ ನಿಷ್ಠಾವಂತ ಸೈನಿಕನಾಗಿರಲು ಬಯಸುತ್ತೇನೆ ಎಂದು ಮುಖ್ಯಮಂತ್ರಿ ಅಖಿಲೇಶ್ ಯಾದವ್ ಸಂಪುಟದಿಂದ ವಜಾಗೊಂಡ ಶಿವಪಾಲ್ ಯಾದವ್ ಹೇಳಿದ್ದಾರೆ.
 
ನಾನು ಯಾವತ್ತೂ ಮುಖ್ಯಮಂತ್ರಿಯಾಗಬೇಕು ಎಂದು ಬಯಸಿಲ್ಲ. ಒಂದು ವೇಳೆ ಮುಖ್ಯಮಂತ್ರಿಯಾಗುವ ಬಯಕೆಯಿದ್ದರೆ 2003ರಲ್ಲಿಯೇ ನಾನು ಮುಖ್ಯಮಂತ್ರಿಯಾಗಿರುತ್ತಿದ್ದೆ. ಆದರೆ, ಮುಲಾಯಂ ಸಿಂಗ್ ಯಾದವ್ ಮುಖ್ಯಮಂತ್ರಿಯಾಗಲು ಬೆಂಬಲ ನೀಡಿದ್ದೇನೆ ಎಂದರು. 
 
ಸಮಾಜವಾದಿ ಪಕ್ಷದ ರಾಜ್ಯಾಧ್ಯಕ್ಷ ಹುದ್ದೆ ಇರಲಿ ಅಥವಾ ಹೋಗಲಿ ನನಗೆ ಚಿಂತೆಯಿಲ್ಲ. ನಾನು ಸದಾ ಮುಲಾಯಂ ಸಿಂಗ್ ಅವರ ಶಿಸ್ತಿನ ಸಿಪಾಯಿಯಾಗಿರುತ್ತೇನೆ ಎಂದು ತಿಳಿಸಿದ್ದಾರೆ.
 
ಸಮಾಜವಾದಿ ಪಕ್ಷ ಬಿಹಾರ್‌ನಂತೆ ಮಹಾಮೈತ್ರಿಕೂಟ ರಚಿಸಲಿದ್ದು, ಬಿಜೆಪಿ ಅಧಿಕಾರಕ್ಕೆ ಬರುವುದನ್ನು ತಡೆಯುವುದು ಮುಖ್ಯ ಉದ್ದೇಶವಾಗಿದೆ ಎಂದು ಸಮಾಜವಾದಿ ಪಕ್ಷದ ಮುಖಂಡ ಶಿವಪಾಲ್ ಯಾದವ್ ಹೇಳಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

ವೆಬ್ದುನಿಯಾವನ್ನು ಓದಿ