ಅಭಿವೃದ್ಧಿಯ ಹೊಸ ಶಕೆ : ನರೇಂದ್ರ ಮೋದಿ!

ಸೋಮವಾರ, 25 ಏಪ್ರಿಲ್ 2022 (11:12 IST)
ಜಮ್ಮು-ಕಾಶ್ಮೀರ : ಕಳೆದ 2-3 ವರ್ಷಗಳಲ್ಲಿ ಕೈಗೊಂಡ ಹಲವಾರು ಅಭಿವೃದ್ಧಿ ಯೋಜನೆಗಳ ಮೂಲಕ ಜಮ್ಮು-ಕಾಶ್ಮೀರವು, ಪ್ರಜಾಪ್ರಭುತ್ವ ಮತ್ತು ದೃಢ ನಿಶ್ಚಯಕ್ಕೆ ಹೊಸ ಉದಾಹರಣೆಯಾಗಿ ಹೊರಹೊಮ್ಮಿದೆ.
 
ರಾಜ್ಯದಲ್ಲಿ ಅಭಿವೃದ್ಧಿಯ ಹೊಸ ಯುಗವೇ ಆರಂಭವಾಗಿದೆ ಎಂದು ಎಂದು ಪ್ರಧಾನಿ ನರೇಂದ್ರ ಮೋದಿ ಬಣ್ಣಿಸಿದ್ದಾರೆ.

‘ಕಳೆದ 2 ವರ್ಷಗಳಲ್ಲಿ ರಾಜ್ಯಕ್ಕೆ 38,000 ಕೋಟಿ ರು.ನಷ್ಟುಖಾಸಗಿ ಬಂಡವಾಳ ಹೂಡಿಕೆಯಾಗಿದೆ, ಜೊತೆಗೆ ಪ್ರವಾಸಿಗರ ಸಂಖ್ಯೆಯಲ್ಲೂ ಭಾರೀ ಏರಿಕೆಯಾಗಿದೆ’ ಎಂದೂ ಅವರು ಹರ್ಷಿಸಿದ್ದಾರೆ.

ಈ ಮೂಲಕ ಉಗ್ರವಾದದ ಬೀಡಾಗಿದ್ದ ರಾಜ್ಯದಲ್ಲಿ ಈಗ ಪರಿವರ್ತನೆಯ ಶಕೆ ಆರಂಭವಾಗಿದೆ ಎಂಬ ಸುಳಿವನ್ನು ಅವರು ನೀಡಿದ್ದಾರೆ.

ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ರದ್ದಾದ ನಂತರ ಮೋದಿ ಇದೇ ಮೊದಲ ಬಾರಿಗೆ ಭಾನುವಾರ, ಇಲ್ಲಿಗೆ ಭೇಟಿ ನೀಡಿದರು. ‘ರಾಷ್ಟ್ರೀಯ ಪಂಚಾಯತ್ ದಿನ’ದ ಅಂಗವಾಗಿ ಭಾನುವಾರ ಜಮ್ಮವಿನಿಂದ 15 ಕಿ.ಮೀ ದೂರದ ಪಲ್ಲಿಯಲ್ಲಿ ಆಯೋಜಿಸಿದ್ದ ಬೃಹತ್ ಕಾರ್ಯಕ್ರಮದ ಮೂಲಕ ದೇಶದ ಎಲ್ಲಾ ಗ್ರಾಮಸಭೆಗಳನ್ನು ಉದ್ದೇಶಿಸಿ ಮಾತನಾಡಿದರು. ಇದೇ ವೇಳೆ, ರಾಜ್ಯದ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಚಾಲನೆ ನೀಡಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ