ಸಾಮಾಜಿಕ ಮಾಧ್ಯಮ ಪ್ರಭಾವಿಗಳಿಗೆ ಹೊಸ ಗೈಡ್‌ಲೈನ್ಸ್

ಶುಕ್ರವಾರ, 24 ಮಾರ್ಚ್ 2023 (11:42 IST)
ನವದೆಹಲಿ : ಸೆಲೆಬ್ರಿಟಿಗಳು, ಸಿನಿಮಾ ನಟ-ನಟಿಯರು, ಪ್ರಭಾವಿ ವ್ಯಕ್ತಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ಜಾಹೀರಾತು ನೀಡುವುದು ಸಾಮಾನ್ಯ. ಆದರೆ ಇನ್ನು ಮುಂದೆ ಯಾವುದೇ ವಸ್ತು ಅಥವಾ ಸೇವೆಗಳನ್ನು ಪ್ರಚಾರ ಮಾಡುವಾಗ ಸೆಲೆಬ್ರಿಟಿ ಅಥವಾ ಪ್ರಭಾವಿ ವ್ಯಕ್ತಿಗಳು ಕೆಲ ಗೈಡ್ಲೈನ್ಸ್ ಅನ್ನು ಪಾಲಿಸಬೇಕೆಂದು ಕೇಂದ್ರ ತಿಳಿಸಿದೆ.
 
ಸೆಲೆಬ್ರಿಟಿಗಳು ಹಾಗೂ ಪ್ರಭಾವಿ ವ್ಯಕ್ತಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ಉತ್ಪನ್ನ ಹಾಗೂ ಸೇವೆಗಳನ್ನು ಅನುಮೋದಿಸುವಾಗ ಕಡ್ಡಾಯವಾಗಿ ಎಂಡೋರ್ಸ್ಮೆಂಟ್ಸ್ ನೋ-ಹೌ ಎಂಬ ಹೊಸ ಮಾರ್ಗಸೂಚಿಯನ್ನು ಅನುಸರಿಸಬೇಕು ಎಂದು ಕೇಂದ್ರ ಗ್ರಾಹಕ ವ್ಯವಹಾರಗಳ ಇಲಾಖೆ ತಿಳಿಸಿದೆ. ಇದರ ಪ್ರಕಾರ ಉತ್ಪನ್ನಗಳನ್ನು ಪ್ರಚಾರ ಮಾಡುವಾಗ ಜಾಹೀರಾತು, ಪ್ರಾಯೋಜಿತ, ಸಹಯೋಗ ಅಥವಾ ಪಾವತಿಸಿದ ಪ್ರಚಾರದಂತಹ ಪದಗಳನ್ನು ಬಳಸಬೇಕು ಎಂದು ಹೇಳಿದೆ.

ಗ್ರಾಹಕ ವ್ಯವಹಾರಗಳ ಇಲಾಖೆ ಹೊರಡಿಸಿರುವ ಮಾರ್ಗಸೂಚಿಯಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ಅತಿ ಹೆಚ್ಚು ಫಾಲೋರ್ಸ್ಗಳನ್ನು ಹೊಂದಿರುವ ವ್ಯಕ್ತಿಗಳು ಯಾವುದೇ ವಸ್ತು ಅಥವಾ ಸೇವೆಗಳನ್ನು ಪ್ರಚಾರ ಮಾಡುವಾಗ ತಾವು ಯಾವ ಉದ್ದೇಶಕ್ಕಾಗಿ ನಿರ್ದಿಷ್ಟ ಉತ್ಪನ್ನವನ್ನು ಪ್ರಚಾರ ಮಾಡುತ್ತಿರುವುದು ಎಂಬುದನ್ನು ಕಡ್ಡಾಯವಾಗಿ ತಿಳಿಸಬೇಕಿದೆ. ಹಣದ ಲಾಭಕ್ಕೋ, ಕೊಡುಗೆಯೋ ಎಂಬುದನ್ನು ಉಲ್ಲೇಖಿಸಬೇಕು ಎಂದಿದೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ