ಗ್ರಾಹಕರಿಗೆ ಶಾಕ್ : ಬೆಲೆ ಮತ್ತಷ್ಟು ದುಬಾರಿ!

ಶನಿವಾರ, 25 ಮಾರ್ಚ್ 2023 (08:41 IST)
ಮುಂಬೈ : ದೇಶದ ಅತಿದೊಡ್ಡ ಕಾರು ತಯಾರಕ ಸಂಸ್ಥೆಯಾದ ಮಾರುತಿ ಸುಜುಕಿ ಇಂಡಿಯಾ ಮುಂಬರುವ ದಿನಗಳಲ್ಲಿ ತನ್ನ ಉತ್ಪನ್ನಗಳ ಮೇಲಿನ ಬೆಲೆ ಹೆಚ್ಚಿಸಲು ನಿರ್ಧರಿಸಿದೆ. ಏಪ್ರಿಲ್ 1 ರಿಂದಲೇ ಎಲ್ಲಾ ವಾಹನಗಳ ಮೇಲಿನ ಬೆಲೆಯನ್ನು ಹೆಚ್ಚಿಸಲಾಗುತ್ತದೆ ಎಂದು ಕಂಪನಿ ತನ್ನ ಹೇಳಿಕೆಯಲ್ಲಿ ಗುರುವಾರ ತಿಳಿಸಿದೆ.
 
ಕಳೆದ ಎರಡು ದಿನಗಳ ಹಿಂದೆಯಷ್ಟೇ ಪ್ರತಿಷ್ಠಿತ ಟಾಟಾ ಮೋಟರ್ಸ್ ಏಪ್ರಿಲ್ 1 ರಿಂದ ವಾಣಿಜ್ಯ ವಾಹನಗಳ ಮೇಲಿನ ಬೆಲೆ ಶೇ.5 ರಷ್ಟು ಹೆಚ್ಚಿಸುವ ನಿರ್ಧಾರ ಪ್ರಕಟಿಸಿತ್ತು. ದ್ವಿಚಕ್ರ ವಾಹನ ತಯಾರಕ ಸಂಸ್ಥೆಯಾದ ಹೀರೋ ಮೋಟೋಕಾರ್ಪ್ ಕಂಪನಿಯೂ ಏಪ್ರಿಲ್ 1 ರಿಂದ ತನ್ನ ಬೈಕ್ಗಳು ಮತ್ತು ಸ್ಕೂಟರ್ಗಳ ಬೆಲೆ ಶೇ.2 ರಷ್ಟು ಹೆಚ್ಚಿಸುವುದಾಗಿ ತಿಳಿಸಿತ್ತು. ಈ ಬೆನ್ನಲ್ಲೇ ಮಾರುತಿ ಸುಜುಕಿ ಕಾರು ತಯಾರಕ ಕಂಪನಿ ಬೆಲೆ ಹೆಚ್ಚಿಸುವ ನಿರ್ಧಾರ ಪ್ರಕಟಿಸಿದೆ. 

ಸರ್ಕಾರದ ನೀತಿಗಳು, ಹಣದುಬ್ಬರ ಹಾಗೂ ಉತ್ಪಾದನಾ ವೆಚ್ಚ ಹೆಚ್ಚಳದಿಂದಾಗಿ ಆರ್ಥಿಕತೆ ಸರಿದೂಗಿಸಲು ಕಾರುಗಳ ಬೆಲೆ ಏರಿಸುವುದು ಅನಿವಾರ್ಯ. ಏಪ್ರಿಲ್ನಿಂದ ಬೆಲೆ ಏರಿಕೆ ಅನ್ವಯವಾಗಲಿದೆ ಎಂದು ಮಾರುತಿ ಸುಜುಕಿ ಇಂಡಿಯಾ ತಿಳಿಸಿದೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ