ವಿದ್ಯುತ್ ಉಳಿತಾಯಕ್ಕೆ ಕೇಂದ್ರ ಇಂಧನ ಇಲಾಖೆಯ ಹೊಸ ಪ್ಲ್ಯಾನ್
ಶನಿವಾರ, 23 ಜೂನ್ 2018 (15:17 IST)
ನವದೆಹಲಿ : ದೇಶದ ಯಾವ ಮೂಲೆಯಲ್ಲಿ ಯಾವುದೇ ಕೆಲಸವಾಗಬೇಕಾದರೂ ಕೂಡ ವಿದ್ಯುತ್ ಅವಶ್ಯಕವಾಗಿ ಬೇಕು. ಆದ ಕಾರಣ ಬಹುಮುಖ್ಯವಾದಂತಹ ಈ ವಿದ್ಯುತ್ ಅನಗತ್ಯವಾಗಿ ಖರ್ಚಾಗುವುದನ್ನು ತಡೆಯಲು ಕೇಂದ್ರ ಇಂಧನ ಇಲಾಖೆ ಒಂದು ಹೊಸ ನಿರ್ಧಾರವನ್ನು ಕೈಗೊಂಡಿದೆ.
ಈ ಮೂಲಕ ಕೇಂದ್ರ ಇಂಧನ ಇಲಾಖೆ ಎಸಿ ತಯಾರಕ ಕಂಪನಿಗಳು 24 ಡಿಗ್ರಿ ಸೆಲ್ಸಿಯಸ್‌ಗೆ ಡಿಪಾಲ್ಟ್ ಸೆಟ್ಟಿಂಗ್ ಮಾಡಬೇಕು ಎಂದು ಸೂಚನೆ ನೀಡಿದೆ. ಈ ಬಗ್ಗೆ ಮಾತನಾಡಿದ ಕೇಂದ್ರ ಇಂಧನ ಸಚಿವ ಆರ್ ಕೆ ಸಿಂಗ್ ಅವರು,’ ಎಸಿ ತಯಾರಕ ಕಂಪನಿಗಳು 24 ಡಿಗ್ರಿ ಸೆಲ್ಸಿಯಸ್‌ಗೆ ಡಿಪಾಲ್ಟ್ ಸೆಟ್ಟಿಂಗ್ ಮಾಡಬೇಕು. ಇಂಧನ ಉಳಿತಾಯಕ್ಕೆ ಇದು ಮೊದಲ ಹೆಜ್ಜೆಯಾಗಿದ್ದು ನಂತರ ಕಡ್ಡಾಯ ಮಾಡಲಾಗುವುದು. ಒಂದು ಡಿಗ್ರಿ ಟೆಂಪ್ರೆಚರ್ ಏರಿಳಿತದಿಂದ ಶೇ. 6 ರಷ್ಟು ವಿದ್ಯುತ್ ಉಳಿಸಬಹುದು. ಹೊಟೆಲ್ ಗಳು, ಕಚೇರಿಗಳು 18 ರಿಂದ 21 ಡಿಗ್ರಿಗೆ ಎಸಿ ಸೆಟ್ ಮಾಡಿಕೊಂಡಿರುತ್ತವೆ. 24 ರಿಂದ 26 ಡಿಗ್ರಿಗೆ ಇಟ್ಟರೆ ಮನುಷ್ಯನ ದೇಹದ ಮೇಲೆ ಯಾವುದೇ ಪರಿಣಾಮ ಬೀರಲ್ಲ ಎಂದು ಹೇಳಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ