ಮುಂದೆ ಇಂತಹ ಮೂರ್ಖ ಪ್ರಧಾನಿಯನ್ನು ಆಯ್ಕೆ ಮಾಡಬೇಡಿ: ಬಿಜೆಪಿ ಮುಖಂಡ

ಮಂಗಳವಾರ, 15 ನವೆಂಬರ್ 2016 (15:26 IST)
ಮುಂಬರುವ ಚುನಾವಣೆಗಳಲ್ಲಿ ಇಂತಹ ಮೂರ್ಖ ಪ್ರಧಾನಿಯನ್ನು ದೇಶದ ಜನತೆ ಮತ್ತೆ ಆಯ್ಕೆ ಮಾಡಬಾರದು ಎಂದು ಅಟಲ್ ಬಿಹಾರಿ ವಾಜಪೇಯಿ ಸಂಪುಟದಲ್ಲಿ ಸಚಿವರಾಗಿದ್ದ ಬಿಜೆಪಿ ಮುಖಂಡ ಅರುಣ್ ಶೌರಿ ಗುಡುಗಿದ್ದಾರೆ.
 
500 ಮತ್ತು 1000 ರೂ ನೋಟುಗಳ ಮೇಲೆ ಹೇರಿದ ನಿಷೇಧ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಅವರು ಪ್ರಧಾನಿ ಮೋದಿಗೆ ಸಂಸಾರದ ಕಷ್ಟ ಸುಖಗಳ ಬಗ್ಗೆ ಅರಿವಿಲ್ಲ. ಸಂಸಾರಸ್ಥರನ್ನು ಮಾತ್ರ ಪ್ರಧಾನಿಯಾಗಿ ಆಯ್ಕೆ ಮಾಡಬೇಕು ಎಂದು ಕರೆ ನೀಡಿದ್ದಾರೆ. 
 
ಪ್ರಧಾನಿ ಮೋದಿಗೆ ಪತ್ನಿ, ಮಕ್ಕಳು, ಕುಟುಂಬಗಳು ಎದುರಿಸುವಂತಹ ಕಷ್ಟಗಳ ಬಗ್ಗೆ ಶೂನ್ಯ ಜ್ಞಾನವಿದೆ. ಸಂಸಾರಸ್ಥನಾಗಿದ್ದರೆ ಜನತೆಯ ಕಷ್ಟಗಳ ಬಗ್ಗೆ ಗೊತ್ತಾಗುತ್ತಿತ್ತು. ಕೇವಲ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಜನತೆಯನ್ನು ಸಂಕಷ್ಟಕ್ಕೀಡು ಮಾಡುತ್ತಿರುವುದು ನಾಚಿಕೆಗೇಡಿತನದ ಸಂಗತಿಯಾಗಿದೆ ಎಂದು ಕಿಡಿಕಾರಿದ್ದಾರೆ.
 
ಮತ್ತೊಂದೆಡೆ, 500 ರೂ ಮತ್ತು 1000 ರೂಗಳ ನೋಟುಗಳಿಗೆ ನಿಷೇಧ ಹೇರಿದ್ದರಿಂದ ಕಪ್ಪು ಹಣ, ನಕಲಿ ನೋಟು ಚಲಾವಣೆ ಮತ್ತು ಭ್ರಷ್ಟಾಚಾರ ತಡೆ ಸಾಧ್ಯವಾಗಲಿದೆ. ಡಿಸೆಂಬರ್ 31 ರವರೆಗೆ ಹಳೆಯ ನೋಟುಗಳನ್ನು ಬ್ಯಾಂಕ್‌ಗಳಲ್ಲಿ ಬದಲಿಸಬಹುದಾಗಿದೆ ಎಂದು ಪ್ರಧಾನಿ ಮೋದಿ ಘೋಷಿಸಿದ್ದಾರೆ. 
 
2.5 ಲಕ್ಷಕ್ಕಿಂತ ಹೆಚ್ಚು ಹಣವನ್ನು ಬ್ಯಾಂಕ್‌ನಲ್ಲಿ ಜಮೆ ಮಾಡಿದಲ್ಲಿ 200 ಪಟ್ಟು ದಂಡ ಹೇರಲಾಗುವುದು ಎನ್ನುವ ಕೇಂದ್ರ ಸರಕಾರದ ನಿರ್ಧಾರದಿಂದ, ದೇಶದ ಜನತೆ ತೀವ್ರ ತೆರೆನಾದ ಸಂಕಷ್ಟಗಳನ್ನು ಎದುರಿಸಬೇಕಾಗಿ ಬಂದಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

ವೆಬ್ದುನಿಯಾವನ್ನು ಓದಿ