ನಿರ್ಭಯಾ ರೇಪ್ ಸಂತ್ರಸ್ತೆಯ ಸಹೋದರ ಹೀಗಾಗುವುದಕ್ಕೆ ರಾಹುಲ್ ಗಾಂಧಿಯೇ ಕಾರಣವಂತೆ!

ಶುಕ್ರವಾರ, 3 ನವೆಂಬರ್ 2017 (09:54 IST)
ನವದೆಹಲಿ: ದೆಹಲಿಯಲ್ಲಿ ಗ್ಯಾಂಗ್ ರೇಪ್ ಗೊಳಗಾಗಿದ್ದ ಸಂತ್ರಸ್ತೆ ನಿರ್ಭಯಾ ಪ್ರಕರಣ ಯಾರು ತಾನೇ ಮರೆಯಲು ಸಾಧ್ಯ? ಈ ಸಂತ್ರಸ್ತೆಯ ಸಹೋದರ ಇಂದು ಪೈಲಟ್ ಟ್ರೈನಿಂಗ್ ಮುಗಿಸಿದ್ದಾನೆ. ಇದಕ್ಕೆಲ್ಲಾ ಕಾರಣ ರಾಹುಲ್ ಗಾಂಧಿ ಎಂದಿದ್ದಾರೆ ಸಂತ್ರಸ್ತರ ಪೋಷಕರು.

 
ನಿರ್ಭಯಾ ಪ್ರಕರಣದ ನಂತರ ಹಲವು ನಮ್ಮ ನೆರವಿಗೆ ಬಂದರು. ಆರಂಭದಲ್ಲಿ ಎಲ್ಲರೂ ನಮ್ಮ ಸಹಾಯಕ್ಕಿದ್ದರು. ಆದರೆ ಇಲ್ಲಿಯವರೆಗೂ ನಮ್ಮ ನೆರವಿಗೆ ಬಂದಿದ್ದು ರಾಹುಲ್ ಗಾಂಧಿ.  ಅವರಿಂದಾಗಿಯೇ ನಮ್ಮ ಮಗ ಇಂದು ತರಬೇತಿ ಮುಗಿಸಿ ಪೈಲಟ್ ಆಗಿದ್ದಾನೆ ಎಂದು ನಿರ್ಭಯಾ ಪೋಷಕರು ಖಾಸಗಿ ವಾಹಿನಿಯೊಂದಕ್ಕೆ ಹೇಳಿಕೊಂಡಿದ್ದಾರೆ.

ಆಗಾಗ ತಮ್ಮ ಮಗನಿಗೆ ಧೈರ್ಯ ತುಂಬುತ್ತಿದ್ದ ರಾಹುಲ್, ಆತನನ್ನು ಪೈಲಟ್ ತರಬೇತಿ ಕೇಂದ್ರಕ್ಕೆ ಸೇರಿಸಿದರು. ಕೊನೆಯವರೆಗೂ ನಮಗೆ ಅವರು ಧೈರ್ಯ ತುಂಬುತ್ತಿದ್ದರು. ಆದರೆ ತನ್ನ ಕೆಲಸವನ್ನು ಮಾಧ್ಯಮ ಮುಂದೆ ಹೇಳಿಕೊಳ್ಳಬಾರದು. ಇದನ್ನು ಮಾನವೀಯ ದೃಷ್ಟಿಯಿಂದ ಮಾಡುತ್ತಿದ್ದೇನೆ. ರಾಜಕೀಯ ಕಾರಣಗಳಿಗಲ್ಲ ಎಂದಿದ್ದರು ಎಂದು ನಿರ್ಭಯಾ ಪೋಷಕರು ಸಂದರ್ಶನದಲ್ಲಿ ಹೇಳಿದ್ದಾರ.ೆ

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ