ಫೆಬ್ರವರಿ 1 ಕ್ಕೂ ನಡೆಯಲ್ಲ ನಿರ್ಭಯಾ ಅಪರಾಧಿಗಳ ಗಲ್ಲು ಶಿಕ್ಷೆ! ಕಾರಣವೇನು ಗೊತ್ತಾ?

ಗುರುವಾರ, 23 ಜನವರಿ 2020 (09:01 IST)
ನವದೆಹಲಿ: ದೇಶವೇ ಕಾದು ಕುಳಿತಿರುವ ನಿರ್ಭಯಾ ಗ್ಯಾಂಗ್ ರೇಪ್ ಆರೋಪಿಗಳ ಗಲ್ಲು ಶಿಕ್ಷೆ ಫೆಬ್ರವರಿ 1 ರಂದೂ ನಡೆಯುವುದು ಅನುಮಾನವಾಗಿದೆ. ಇದಕ್ಕೆ ಕಾರಣ ಭಾರತೀಯ ಕಾನೂನಿನಲ್ಲಿ ಅಪರಾಧಿಗಳಿಗೆ ಇರುವ ಅವಕಾಶ.


1982 ರ ಸುಪ್ರೀಂಕೋರ್ಟ್ ನಿರ್ದೇಶನದಂತೆ ಗಲ್ಲು ಶಿಕ್ಷೆ ಜಾರಿಗೊಳಿಸಲು ಅಪರಾಧಿಗಳ ಕ್ಷಮಾದಾನ ಅರ್ಜಿ ತಿರಸ್ಕೃತವಾಗಿ 14 ದಿನಗಳ ಅಂತರವಿರಬೇಕು. ಆದರೆ ಈ ಪ್ರಕರಣದಲ್ಲಿ ಇನ್ನೂ ಇಬ್ಬರು ಅಪರಾಧಿಗಳು ಅಂತಿಮ ಹಂತದ ಅರ್ಜಿ ಸಲ್ಲಿಸಲು ಬಾಕಿಯಿದೆ.

ಅಪರಾಧಿಗಳ ಪೈಕಿ ವಿನಯ್ ಕುಮಾರ್ ಕ್ಷಮಾದಾನ ಅರ್ಜಿ ವಿವಾದ ರಾಷ್ಟ್ರಪತಿಗಳ ಬಳಿಯಿದೆ. ಹಿಂದೆ ಸಲ್ಲಿಸಿದ್ದ ಕ್ಷಮಾದಾನ ಅರ್ಜಿಗೆ ತಾನು ಖುದ್ದಾಗಿ ಸಹಿ ಹಾಕಿರಲಿಲ್ಲ. ಜೈಲು ಅಧಿಕಾರಿಗಳು ಪಿತೂರಿ ನಡೆಸಿದ್ದರು ಎಂದು ವಿನಯ್ ಈ ಮೊದಲು ಆರೋಪಿಸಿದ್ದ. ಹೀಗಾಗಿ ಈ ಅರ್ಜಿ ಇದೀಗ ರಾಷ್ಟ್ರಪತಿಗಳ ಬಳಿಯಿದೆ.

ಇನ್ನು ಪವನ್ ಗುಪ್ತಾ ಮತ್ತು ಅಕ್ಷಯ್ ಕುಮಾರ್ ಕ್ಯುರೇಟಿವ್ ಅರ್ಜಿ ಸಲ್ಲಿಸಿಲ್ಲ. ಈ ಇಬ್ಬರೂ ಅಪರಾಧಿಗಳು ಒಬ್ಬೊಬ್ಬರಾಗಿ ಕ್ಯುರೇಟಿವ್ ಅರ್ಜಿ ಸಲ್ಲಿಸುವ ನಿರೀಕ್ಷೆಯಿದೆ. ಹೀಗಾಗಿ ಇದೆಲ್ಲಾ ಕಳೆದ ಮೇಲಷ್ಟೇ ಗಲ್ಲು ಶಿಕ್ಷೆ ಜಾರಿಗೊಳಿಸಲು ಸಾಧ‍್ಯ. ಹೀಗಾಗಿ ಫೆಬ್ರವರಿ 1 ರಂದು ಗಲ್ಲು ಶಿಕ್ಷೆ ಜಾರಿಗೊಳಿಸಲು ಸಾಧ‍್ಯವಾಗದು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ