ಬಿಹಾರ ಸಿಎಂ ಸ್ಥಾನಕ್ಕೆ ನಿತೀಶ್ ಕುಮಾರ್ ರಾಜೀನಾಮೆ

Krishnaveni K

ಭಾನುವಾರ, 28 ಜನವರಿ 2024 (11:20 IST)
ಪಾಟ್ನಾ: ಬಿಹಾರ ಸಿಎಂ ಸ್ಥಾನಕ್ಕೆ ನಿತೀಶ್ ಕುಮಾರ್ ರಾಜೀನಾಮೆ ನೀಡಿದ್ದು, ಮತ್ತೆ ಬಿಜೆಪಿ ನೇತೃತ್ವದ ಎನ್ ಡಿಎ ಮೈತ್ರಿಕೂಟದ ಜೊತೆ ಕೈಜೋಡಿಸುವ ಸಾಧ‍್ಯತೆಯಿದೆ.

ಇಂದು ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅವರಿಗೆ ನಿತೀಶ್ ಅಧಿಕೃತವಾಗಿ ರಾಜೀನಾಮೆ ಪತ್ರ ಸಲ್ಲಿಸಿದರು. ಇದರೊಂದಿಗೆ ಬಿಹಾರದಲ್ಲಿ ಲಾಲೂ ಪ್ರಸಾದ್ ಯಾದವ್ ನೇತೃತ್ವದ  ಆರ್ ಜೆಡಿ ಜೊತೆಗಿನ ಸಖ‍್ಯ ಕೊನೆಗೊಳಿಸಿದ್ದಾರೆ. ಅಲ್ಲದೆ, ಅಲ್ಲಿನ ಸಮ್ಮಿಶ್ರ ಸರ್ಕಾರವೂ ಮುರಿದುಬಿದ್ದಂತಾಗಿದೆ. ಕಳೆದ 18 ತಿಂಗಳಿನ ಮಿತ್ರತ್ವಕ್ಕೆ ತೆರ ಬಿದ್ದಿದೆ.

ಇತ್ತೀಚೆಗಷ್ಟೇ ಸೀಟು ಹಂಚಿಕೆ ವಿಚಾರದಲ್ಲಿ ಅಸಮಾಧಾನಗೊಂಡಿದ್ದ ನಿತೀಶ್ ಕುಮಾರ್ ಇಂಡಿಯಾ ಮೈತ್ರಿಕೂಟದಿಂದ ಹೊರಬಂದಿದ್ದರು.ಇದೀಗ ವಿಪಕ್ಷಗಳ ಮೈತ್ರಿ ಕೂಟದಿಂದಲೂ ಹೊರಬರುವ ಮೂಲಕ ಬಿಜೆಪಿ ಜೊತೆ ಕೈ ಜೋಡಿಸುವ ಎಲ್ಲಾ ಲಕ್ಷಣಗಳಿವೆ.

ಈ ಮೊದಲು ನಿತೀಶ್ ಬಿಜೆಪಿಯ ಎನ್ ಡಿಎ ಮೈತ್ರಿಕೂಟದ ಭಾಗವಾಗಿದ್ದರು. ಆದರೆ ಬಳಿಕ ನರೇಂದ್ರ ಮೋದಿ ಜೊತೆಗಿನ ಭಿನ್ನಾಭಿಪ್ರಾಯಗಳಿಂದಾಗಿ ಎನ್ ಡಿಎದಿಂದ ಹೊರಬಂದಿದ್ದರು. 18 ತಿಂಗಳ ಜೊತೆ ಅಂದಿನ ಯುಪಿಎ ಮಿತ್ರ ಪಕ್ಷವಾಗಿದ್ದ ಆರ್ ಜೆಡಿ ಜೊತೆ ಸಖ‍್ಯ ಬೆಳೆಸಿ ಸರ್ಕಾರ ರಚಿಸಿದ್ದರು.

ಇದೀಗ ಜೆಡಿಯು ಪಕ್ಷದ ನಾಯಕರ ಜೊತೆ ಸಮಾಲೋಚನೆ ನಡೆಸಿದ ಬಳಿಕ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಸದ್ಯದಲ್ಲೇ ಅವರ ಮುಂದಿನ ರಾಜಕೀಯ ನಡೆ ಏನೆಂದು ತಿಳಿದುಬರಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ