ಪಾಟ್ನಾ ಸಭೆಯ ನಂತರ ಆರ್‌ಜೆಡಿ ನಾಯಕರ ಅತೃಪ್ತಿ

ಬುಧವಾರ, 5 ಜುಲೈ 2023 (14:58 IST)
ಜೂನ್ 23 ರಂದು ಪಾಟ್ನಾದಲ್ಲಿ ವಿರೋಧ ಪಕ್ಷಗಳ ಸಭೆ ನಡೆದ ಬಳಿಕ ಆರ್ಜೆಡಿಯಲ್ಲಿ ಬಂಡಾಯ ಶುರುವಾಗಿದೆ. ನಿತೀಶ್ ಕುಮಾರ್ ಪ್ರಧಾನಿ ಅಭ್ಯರ್ಥಿಯಾಗಿ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿ ಡಿಸಿಎಂ ತೇಜಸ್ವಿಯಾದವ್ಗೆ ಅವಕಾಶ ನೀಡಬೇಕು ಎನ್ನುವ ಮಾತುಗಳು ಕೇಳಿ ಬರುತ್ತಿವೆ.
 
ಈ ಸ್ಥಾನವನ್ನು ಬಿಟ್ಟು ಕೊಡಲು ನಿತೀಶ್ ಕುಮಾರ್ ಸಿದ್ಧವಿಲ್ಲ. ಈ ಹಿನ್ನೆಲೆ ಜೆಡಿಯು, ಆರ್ಜೆಡಿ ನಡುವೆ ಸಣ್ಣ ಮಟ್ಟದ ತಿಕ್ಕಾಟ ಶುರುವಾಗಿದೆ. ಮಹಾರಾಷ್ಟ್ರದಲ್ಲಿ ನಡೆದ ಭಾರೀ ರಾಜಕೀಯ ನಾಟಕದ ಬಳಿಕ ಬಿಹಾರದ ಮಾಜಿ ಉಪಮುಖ್ಯಮಂತ್ರಿ ಮತ್ತು ಬಿಜೆಪಿ ಸಂಸದ ಸುಶೀಲ್ ಮೋದಿ ಟ್ವೀಟ್ನಲ್ಲಿ ಇದೇ ರೀತಿಯ ಪರಿಸ್ಥಿತಿ ಬಿಹಾರದಲ್ಲೂ ಸಂಭವಿಸಬಹುದು ಎಂದು ಹೇಳಿದ್ದಾರೆ.

ಶೀಘ್ರದಲ್ಲೇ ಜೆಡಿಯುನಲ್ಲಿಯೂ ಒಡಕು ಉಂಟಾಗಬಹುದು ಎಂದು ಸುಶೀಲ್ ಮೋದಿ ಹೇಳಿಕೊಂಡಿದ್ದು, ಇಂತಹ ವಿಭಜನೆಯ ಭೀತಿಯಿಂದ ನಿತೀಶ್ ಕುಮಾರ್ ತಮ್ಮ ಶಾಸಕರೊಂದಿಗೆ ಪ್ರತ್ಯೇಕ ಚರ್ಚೆ ನಡೆಸುತ್ತಿದ್ದಾರೆ ಎಂದು ಆರೋಪಿಸಿದೆ. ಈ ನಡುವೆ ನಿತೀಶ್ ಕುಮಾರ್ ವಿಪಕ್ಷಗಳ ನೇತೃತ್ವ ವಹಿಸಿಕೊಂಡಿರುವ ಹಿನ್ನೆಲೆ ಅವರ ಮುಂದಿನ ನಡೆ ಏನಿರಬಹುದು ಎಂದು ತೀವ್ರ ಕುತೂಹಲದಿಂದ ಎದುರು ನೋಡಲಾಗುತ್ತಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ