Mallikarjun Kharge: ಮಲ್ಲಿಕಾರ್ಜುನ ಖರ್ಗೆ ಕಾರ್ಯಕ್ರಮಕ್ಕೆ ಜನರೇ ಇಲ್ಲ: ಕಾಂಗ್ರೆಸ್ ಜಿಲ್ಲಾಧ್ಯಕ್ಷನೇ ಸಸ್ಪೆಂಡ್

Krishnaveni K

ಮಂಗಳವಾರ, 22 ಏಪ್ರಿಲ್ 2025 (12:10 IST)
ಪಾಟ್ನಾ: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸಮಾವೇಶಕ್ಕೆ ಜನವೇ ಬರಲಿಲ್ಲ ಎಂಬ ಕಾರಣಕ್ಕೆ ಬಿಹಾರದ ಬಕ್ಸಾರ್ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷನನ್ನೇ ಅಮಾನತು ಮಾಡಲಾಗಿದೆ.

ಯಾವುದೇ ನಾಯಕರು ಸಮಾವೇಶ ನಡೆಸುವಾಗ ಜನ ಸೇರಿಸುವುದು ಸ್ಥಳೀಯ ನಾಯಕರ ಕೆಲಸವಾಗಿರುತ್ತದೆ. ಆದರೆ ಬಿಹಾರದಲ್ಲಿ ನಡೆದಿದ್ದ ಖರ್ಗೆ ಸಮಾವೇಶಕ್ಕೆ ಕೆಲವೇ ಜನರು ಭಾಗಿಯಾಗಿದ್ದರು. ಇದು ಒಂದು ರೀತಿಯಲ್ಲಿ ಖರ್ಗೆಗೆ ಅವಮಾನಕರವಾಗಿತ್ತು.

ಇದರ ಬೆನ್ನಲ್ಲೇ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮನೋಜ್ ಕುಮಾರ್ ಪಾಂಡೆಯನ್ನು ಅಮಾನತು ಮಾಡಲಾಗಿದೆ.

ಮಲ್ಲಿಕಾರ್ಜುನ ಖರ್ಗೆ ಬರುವ ವಿಚಾರ ತಿಳಿದಿದ್ದೂ ಕಾರ್ಯಕ್ರಮದಲ್ಲಿ ಜನರಿರಲಿಲ್ಲ. ಇದರಿಂದಾಗಿ ಮನೋಜ್ ಕುಮಾರ್ ಹೊಣೆ ಮಾಡಿ ಅನಿರ್ದಿಷ್ಟಾವಧಿಗೆ ಅವರನ್ನು ಅಮಾನತು ಮಾಡಲಾಗಿದೆ ಎಂದು ಬಿಹಾರ ಕಾಂಗ್ರೆಸ್ ಪ್ರಕಟಣೆ ನೀಡಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ