ಜರ್ಮನಿ ಗನ್‌ಮ್ಯಾನ್‌ ದಾಳಿಯಿಂದ ಭಾರತೀಯರು ಪಾರು

ಶನಿವಾರ, 23 ಜುಲೈ 2016 (18:28 IST)
ಜರ್ಮನಿಯ ಮ್ಯೂನಿಚ್‌ನಲ್ಲಿ ನಡೆದ ಉಗ್ರನ ದಾಳಿಯಲ್ಲಿ ಭಾರತೀಯ ನಾಗರಿಕರಿಗೆ ಗಾಯಗಳಾಗಿಲ್ಲ ಎಂದು ಜರ್ಮನಿ ರಾಯಭಾರಿ ಕಚೇರಿಯ ಮೂಲಗಳು ತಿಳಿಸಿವೆ.  
 
ಜನನಿಬಿಡ ಶಾಂಪಿಂಗ್ ಮಾಲ್‌ನಲ್ಲಿ ಉಗ್ರನೊಬ್ಬ ಮನಬಂದಂತೆ ಗುಂಡಿನ ದಾಳಿ ನಡೆಸಿದ್ದರಿಂದ ಒಂಬತ್ತು ಜನರು ಸಾವನ್ನಪ್ಪಿ 50ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
 
ಜರ್ಮನಿಯಲ್ಲಿರುವ ಭಾರತೀಯ ರಾಯಭಾರಿ ಗುರ್ಜಿತ್ ಸಿಂಗ್ ಅವರೊಂದಿಗೆ ಮಾತುಕತೆ ನಡೆಸಿದ್ದು, ಭಾರತೀಯ ನಾಗರಿಕರಿಗೆ ಯಾವುದೇ ಗಾಯಗಳಾಗಿಲ್ಲ ಎಂದು ಕೇಂದ್ರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಟ್ವೀಟ್ ಮಾಡಿದ್ದಾರೆ.
 
18 ವರ್ಷದ ಜರ್ಮನ್-ಇರಾನ್ ಯುವಕನೊಬ್ಬ ಮ್ಯೂನಿಚ್ ಮಾಲ್‌ನಲ್ಲಿ ಗುಂಡಿನ ದಾಳಿ ನಡೆಸಿ ಒಂಬತ್ತು ಮಂದಿಯನ್ನು ಹತ್ಯೆಗೈದ ನಂತರ ತನಗೆ ತಾನೇ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.
 
ಬಂದೂಕುಧಾರಿ ಮೊದಲಿಗೆ ಮ್ಯಾಕ್‌ ಡೊನಾಲ್ಡ್ ರೆಸ್ಟುರಾಂಟ್‌ನಲ್ಲಿ ಗುಂಡಿನ ದಾಳಿ ನಡೆಸಿ ನಂತರ ಬೀದಿಗಳಲ್ಲೂ ಗುಂಡು ಹಾರಿಸುತ್ತಾ ಒಲಿಂಪಿಯಾ ಮಾಲ್‌ಗೆ ನುಗ್ಗಿ ಒಂಬತ್ತು ಮಂದಿಯನ್ನು ಹತ್ಯೆ ಮಾಡಿ 16 ಮಂದಿಯನ್ನು ಗಂಭೀರವಾಗಿ ಗಾಯಗೊಳಿಸಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. 
 
ಘಟನೆಯ ನಂತರ ಭಾರತೀಯರು ಹೊರಗಡೆ ಬರದೆ ಮನೆಯೊಳಗಡೆ ಆಶ್ರಯ ಪಡೆಯುವಂತೆ ಜರ್ಮನಿಯ ಅಧಿಕಾರಿಗಳು ಭಾರತೀಯರಿಗೆ ಸಲಹೆ ನೀಡಿದ್ದಾರೆ 
 
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ