ಮೋದಿ ಹೊರತು ಯಾರೊಬ್ಬರು ಶೌಚಾಲಯ ನಿರ್ಮಾಣದ ಅಗತ್ಯತೆ ಬಗ್ಗೆ ಹೇಳಲಿಲ್ಲ : ರಾಮನಾಥ್ ಕೋವಿಂದ್

ಸೋಮವಾರ, 3 ಏಪ್ರಿಲ್ 2023 (11:01 IST)
ನವದೆಹಲಿ : ಗಾಂಧೀಜಿ ಅವರ ನಂತರ ಈ ದೇಶದಲ್ಲಿ ಯಾರಾದರೂ ಸ್ವಚ್ಛತೆಯ ಮಹತ್ವವನ್ನು ಹೆಚ್ಚು ಅರಿತಿದ್ದರೆ, ಅದು ಮೋದಿ ಮಾತ್ರ. ನರೇಂದ್ರ ಮೋದಿ ಅವರನ್ನು ಹೊರತುಪಡಿಸಿ ಬೇರೆ ಯಾವೊಬ್ಬ ಪ್ರಧಾನಿಯೂ ದೇಶದಲ್ಲಿ ಶೌಚಾಲಯಗಳ ನಿರ್ಮಾಣದ ಅಗತ್ಯತೆಯ ಬಗ್ಗೆ ಹೇಳಲಿಲ್ಲ ಎಂದು ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಹೇಳಿದ್ದಾರೆ.
 
ಭಾನುವಾರ ದೆಹಲಿಯಲ್ಲಿ ನಡೆದ ನೈರ್ಮಲ್ಯ ಕುರಿತ ರಾಷ್ಟ್ರೀಯ ಸಮ್ಮೇಳನದಲ್ಲಿ ಮಾತನಾಡಿದ ಅವರು, ಸ್ವಾತಂತ್ರ್ಯಕ್ಕಿಂತಲೂ ಹೆಚ್ಚಾಗಿ ಸ್ವಚ್ಛತೆಯೂ ಅಗತ್ಯ ಎಂಬುದು ರಾಷ್ಟ್ರಪಿತ ಗಾಂಧೀಜಿಯವರ ನಂಬಿಕೆಯಾಗಿತ್ತು. ಅವರು ಸ್ವಾತಂತ್ರ್ಯ ಮತ್ತು ಸ್ವಚ್ಛತೆಗೆ ಸಮಾನ ಆದ್ಯತೆ ನೀಡಿದ್ದರು ಎಂದು ಹೇಳಿದರು. 

ಗಾಂಧೀಜಿ ಅವರ ನಂತರ ಯಾರಾದರೂ ಸ್ವಚ್ಛತೆಯ ಮಹತ್ವ ಹೆಚ್ಚು ಅರಿತಿದ್ದರೆ, ಅದು ಮೋದಿ ಮಾತ್ರ. ಶೌಚಾಲಯಗಳನ್ನು ನಿರ್ಮಿಸುವ ಬಗ್ಗೆ ರಾಷ್ಟ್ರಪತಿ ಭವನದ ಕೆಂಪುಕೋಟೆಯಿಂದ ಮಾತನಾಡಿದ ಮೊದಲ ಪ್ರಧಾನಿಯೂ ಮೋದಿಯೇ ಆಗಿದ್ದಾರೆ. ಆದರೆ ಅದಕ್ಕೂ ಕೆಲವರು ಮೋದಿಯನ್ನ ಗೇಲಿ ಮಾಡಿದ್ದರು ಎಂದು ಪ್ರಧಾನಿ ನರೇಂದ್ರ ಮೋದಿ ಅವರ ಗುಣಗಾನ ಮಾಡಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ