ಮಹಾರಾಷ್ಟ್ರ ಭಾರೀ ಮಳೆ ಪರಿಣಾಮ, ಕಲಬುರಗಿಯ ರೈತರಿಗೆ ಅಪಾರ ಪ್ರಮಾಣದ ಬೆಳೆ ಹಾನಿ

Sampriya

ಗುರುವಾರ, 25 ಸೆಪ್ಟಂಬರ್ 2025 (19:17 IST)
Photo Credit X
ಕಲಬುರಗಿ: ಜಿಲ್ಲೆಯ ಸೊನ್ನ ಬ್ಯಾರೇಜ್‌ನಿಂದ ಭೀಮಾ ನದಿಗೆ 3.40 ಲಕ್ಷ ಕ್ಯೂಸೆಕ್ ನೀರು ಬಿಡುಗಡೆ ಮಾಡಿದ್ದರಿಂದ ನೀರು  ಹಾಗರದುಂಡಗಿ ಗ್ರಾಮದ ರೈತರ ಜಮೀನಿಗೆ ನುಗ್ಗಿ ಅಪಾರ ಪ್ರಮಾಣದ ಬೆಳೆ ಹಾನಿಯಾದ ಘಟನೆ ವರದಿಯಾಗಿದೆ.

ಮಹಾರಾಷ್ಟ್ರದಲ್ಲಿ ಧಾರಾಕಾರ ಮಳೆ ಹಿನ್ನೆಲೆ ಭೀಮಾ ನದಿಗೆ ಅಪಾರ ಪ್ರಮಾಣದ ನೀರು ಬಿಡುಗಡೆ ಮಾಡಲಾಗಿದೆ. ಮಹಾರಾಷ್ಟ್ರದ ಉಜ್ಜನಿ ಜಲಾಶಯದಿಂದ 50,000 ಕ್ಯೂಸೆಕ್, ಸಿನಾ ಜಲಾಶಯದಿಂದ 2.70 ಲಕ್ಷ ಕ್ಯೂಸೆಕ್, ಭೋರಿ ಹಳ್ಳದಿಂದ 3.20 ಲಕ್ಷ ಕ್ಯೂಸೆಕ್ ನೀರು ಭೀಮಾ ನದಿಗೆ ಬಿಡುಗಡೆ ಮಾಡಲಾಗಿದೆ.

ಅಫಜಲಪುರದ ಸೊನ್ನ ಬ್ಯಾರೇಜ್‌ನಿಂದ 3.20 ಲಕ್ಷ ಕ್ಯೂಸೆಕ್ ನೀರು ಭೀಮಾ ನದಿಗೆ ಬಿಟ್ಟ ಪರಿಣಾಮ, ನದಿ ನೀರು ಹಾಗರಗುಂಡಗಿ ಗ್ರಾಮದ ರೈತರ ಜಮೀನುಗಳಿಗೆ ನುಗ್ಗಿದೆ. ಇದರ ಪರಿಣಾಮ ಹತ್ತಿ, ತೊಗರಿ ಸೇರಿದಂತೆ ಅಪಾರ ಪ್ರಮಾಣದ ಬೆಳೆ ನಾಶವಾಗಿದ್ದು, ಬೆಳೆದು ನಿಂತ ಫಸಲ ಹಾಳಾ‌ಗಿದ್ದನ್ನು ಕಂಡು ರೈತರು ಚಿಂತೇಗಿಡಾಗಿದ್ದಾರೆ. 

ಕಲಬುರಗಿ, ಯಾದಗಿರಿ, ರಾಯಚೂರು ಹಾಗೂ ವಿಜಯಪುರದ ನದಿ ಪಾತ್ರದ ಜನರಲ್ಲಿ ಪ್ರವಾಹ ಆತಂಕ ಸೃಷ್ಟಿಯಾಗಿದೆ. ಜನರು ನದಿಯ ದಡಕ್ಕೆ ಹೋಗದಂತೆ ಜಿಲ್ಲಾಡಳಿತ ಮುನ್ನೆಚ್ಚರಿಕೆ ನೀಡಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ