ಬಿಸಿನೆಸ್ ಮಾಡಲು ಯಾರೂ ಮುಂದೆ ಬರುತ್ತಿಲ್ಲ: ಶಿವಕುಮಾರ್
ಮೂರು ಗಂಟೆಗಳ ಕಾಲ ವಿಚಾರಣೆ ಎದುರಿಸಿದ ಡಿಕೆ ಶಿವಕುಮಾರ್ ಕೆಲವೊಂದು ದಾಖಲೆ ಸಲ್ಲಿಸಲು ಮೂರು ದಿನ ಕಾಲಾವಕಾಶ ಪಡೆದಿದ್ದಾರೆ.
ವಿಚಾರಣೆಗೂ ಮುನ್ನ ಮಾಧ್ಯಮಗಳೊಂದಿಗೆ ಮಾತನಾಡಿದ ಡಿ.ಕೆ.ಶಿವಕುಮಾರ್, ನನ್ನ ಜೊತೆ ವ್ಯವಹರಿಸುತ್ತಿದ್ದವರನ್ನು ಇಡಿ ಅಧಿಕಾರಿಗಳು ವಿಚಾರಣೆ ಮಾಡುತ್ತಿದ್ದಾರೆ.
ಇದರಿಂದ ನನ್ನ ಜೊತೆ ಬಿಸಿನೆಸ್ ಮಾಡಲು ಯಾರೂ ಕೂಡ ಮುಂದೆ ಬರುತ್ತಿಲ್ಲ. ನನ್ನ ಪೋನ್ ರಿಸೀವ್ ಮಾಡಲು ಸಹ ಭಯಪಡುತ್ತಿದ್ದಾರೆ. ನನಗೆ ಸಾಲು ಸಾಲು ವಿಚಾರಣೆಗಳಿದ್ದು, ನಮ್ಮ ಗೋಳು ಮತ್ತು ಕಷ್ಟ ನಿಮ್ಮ ಬಳಿ ಹೇಳಿಕೊಂಡರೆ ಏನು ಪ್ರಯೋಜನವಿಲ್ಲ ಎಂದಿದ್ದಾರೆ.