ಭಾನುವಾರಗಳಂದು ಪೆಟ್ರೋಲ್ ಇಲ್ಲ?

ಮಂಗಳವಾರ, 11 ಏಪ್ರಿಲ್ 2017 (09:23 IST)
ನವದೆಹಲಿ: ವಾಹನ ಸವಾರರಿಗೆ ಇದು ನಿಜಕ್ಕೂ ಒಳ್ಳೆ ಸುದ್ದಿಯಲ್ಲ. ಮೇ 10 ರಿಂದ ಭಾನುವಾರಗಳಂದು ಪೆಟ್ರೋಲ್ ಬಂಕ್ ಗೆ ಹೋದರೆ ಪೆಟ್ರೋಲ್ ಸಿಗದೇ ಇರಬಹುದು.

 

 
ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿ ಪೆಟ್ರೋಲ್ ಬಂಕ್ ಮಾಲಿಕರು ಈ ರೀತಿ ವಿಶಿಷ್ಟ ಪ್ರತಿಭಟನೆ ನಡೆಸಲು ತೀರ್ಮಾನಿಸಿದ್ದಾರೆ. ಕಮಿಷನ್ ಹೆಚ್ಚಿಸಬೇಕೆಂಬುದು ಅವರ ಬೇಡಿಕೆ. ಇದಕ್ಕೆ ಸರ್ಕಾರ ಸ್ಪಂದಿಸದಿದ್ದರೆ, ಮೇ 10 ರಿಂದ ಪ್ರತೀ ಭಾನುವಾರ ಬಂದ್ ನಡೆಸಲು ಉದ್ದೇಶಿಸಿದ್ದಾರೆ.

 
ಇದರಿಂದ ವಾಹನ ಸವಾರರು ಸಂಕಷ್ಟಕ್ಕೆ ಸಿಲುಕಲಿದ್ದಾರೆ. ಅಲ್ಲದೆ ಇತರ ದಿನಗಳಂದು ದಿನಕ್ಕೆ ಕೇವಲ  ಗಂಟೆ ಕರ್ತವ್ಯ ನಿರ್ವಹಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

ವೆಬ್ದುನಿಯಾವನ್ನು ಓದಿ