Caste census: ಕಾಂಗ್ರೆಸ್ ಹೇಳಿದ್ದಕ್ಕಲ್ಲ, ಕೇಂದ್ರ ಸರ್ಕಾರದ ಜಾತಿಗಣತಿ ಹಿಂದಿದೆ ಭಾರೀ ಲೆಕ್ಕಾಚಾರ: ಇದು ನಡೆದರೆ ಭಾರತಕ್ಕೇ ಒಳಿತು

Krishnaveni K

ಗುರುವಾರ, 1 ಮೇ 2025 (11:52 IST)
ನವದೆಹಲಿ: ಇದ್ದಕ್ಕಿದ್ದಂತೆ ಕೇಂದ್ರ ಸರ್ಕಾರ ಜಾತಿಗಣತಿ ಮಾಡಲು ತೀರ್ಮಾನಿಸಿರುವುದರ ಹಿಂದೆ ಭಾರೀ ಲೆಕ್ಕಾಚಾರವಿದೆ ಎನ್ನಲಾಗಿದೆ.  ಕಾಂಗ್ರೆಸ್ ನೀಡಿದ ಸಲಹೆಯಂತಲ್ಲ, ಮೋದಿ ಸರ್ಕಾರ ಬೇರೆಯೇ ಲೆಕ್ಕಾಚಾರ ಹಾಕಿದೆ.

ಕೇಂದ್ರ ಸರ್ಕಾರ ಜಾತಿಗಣತಿ ಮಾಡುವ ನಿರ್ಧಾರವನ್ನು ನಿನ್ನೆ ಪ್ರಕಟಿಸಿದ್ದು ಎಲ್ಲರ ಅಚ್ಚರಿಗೆ ಕಾರಣವಾಗಿತ್ತು. ಇದುವರೆಗೆ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ನಾಯಕರು ಜಾತಿಗಣತಿ ಪರವಾಗಿ ಮಾತನಾಡುತ್ತಿದ್ದರು. ಆದರೆ ಬಿಜೆಪಿ ಜಾತಿಗಣತಿ ಬಗ್ಗೆ ಅಷ್ಟೊಂದು ಆಸಕ್ತಿ ವಹಿಸಿರಲಿಲ್ಲ.

ಆದರೆ ಇದೀಗ ಜನಗಣತಿ ಜೊತೆಗೆ ಜಾತಿಗಣತಿಯನ್ನೂ ಮಾಡಲು ಹೊರಟಿದೆ. ಇದರ ಬೆನ್ನಲ್ಲೇ ರಾಹುಲ್ ಗಾಂಧಿ ಕೇಂದ್ರದ ನಿರ್ಧಾರವನ್ನು ಸ್ವಾಗತಿಸಿದ್ದು ಹೇಗೆ ಮಾಡಬೇಕೆಂದು ನಾವು ಕೆಲವು ಸಲಹೆ ನೀಡುತ್ತೇವೆ ಎಂದಿದ್ದಾರೆ.

ಆದರೆ ಕೇಂದ್ರದ ಜಾತಿಗಣತಿ ಹಿಂದೆ ಬೇರೆಯೇ ಲೆಕ್ಕಾಚಾರವಿದೆ. ಇತ್ತೀಚೆಗಷ್ಟೇ ಪಶ್ಚಿಮ ಬಂಗಾಲದಲ್ಲಿ ವಕ್ಫ್ ವಿರೋಧಿ ಗಲಾಟೆ ವೇಳೆ ಕೆಲವು ಬಾಂಗ್ಲಾದೇಶೀಯರೂ ಭಾಗಿಯಾಗಿದ್ದರು ಎಂಬ ವರದಿಯಾಗಿತ್ತು. ಗುಜರಾತ್ ನಲ್ಲಿ  ಮೊನ್ನೆಯಷ್ಟೇ ಸಾಕಷ್ಟು ಅಕ್ರಮ ಬಾಂಗ್ಲಾದೇಶಿಗರನ್ನು ಹೊರಹಾಕುವ ಕೆಲಸ ಮಾಡಲಾಗಿತ್ತು. ಇದರೊಂದಿಗೆ ಪಾಕಿಸ್ತಾನ ಪ್ರಜೆಗಳನ್ನೂ ಗಡೀಪಾರು ಮಾಡಲಾಗಿತ್ತು. ಹೀಗಾಗಿ ದೇಶದಲ್ಲಿ ಸಾಕಷ್ಟು ಅಕ್ರಮ ವಲಸಿಗರು ಇರುವುದು ಖಚಿತವಾಗಿದೆ.

ಹೀಗಾಗಿಯೇ ಈಗ ಅಕ್ರಮ ವಲಸಿಗರನ್ನು ಗುರುತಿಸುವ ಸಲುವಾಗಿಯೇ ಜಾತಿಗಣತಿ ನಡೆಯಲಿದೆ ಎಂದು ತಿಳಿದುಬಂದಿದೆ. ಕಾಂಗ್ರೆಸ್ ಜಾತಿಗಣತಿಯಲ್ಲಿ ಮುಸ್ಲಿಮರು ಮತ್ತು ಕ್ರಿಶ್ಚಿಯನ್ ಪ್ರತ್ಯೇಕ ಉಪ ಜಾತಿಗಳನ್ನು ಪರಿಗಣಿಸದೇ ಧರ್ಮವನ್ನೇ ಒಂದು ಜಾತಿಯಾಗಿ ವರದಿ ನೀಡಲಾಗಿತ್ತು. ಆದರೆ ಇದೀಗ ಕೇಂದ್ರ ನಡೆಸಲುದ್ದೇಶಿಸಿರುವ ಜಾತಿಗಣತಿಯಲ್ಲಿ ಎಲ್ಲಾ ಧರ್ಮದ ಪ್ರತ್ಯೇಕ ಜಾತಿಗಳನ್ನೂ ಲೆಕ್ಕ ಹಾಕಲಾಗುತ್ತದೆ. ಇದರಿಂದ ಅಕ್ರಮ ವಲಸಿಗರನ್ನೂ ಪತ್ತೆ ಹಚ್ಚಲು ಸುಲಭವಾಗುತ್ತದೆ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ