ಮಧ್ಯಪ್ರದೇಶ ಪೊಲೀಸರಿಗೆ ನಕ್ಸಲರಿಗಿಂತ ಆರೆಸ್ಸೆಸ್, ಬಜರಂಗ ದಳದ ಹೆದರಿಕೆ

ಮಂಗಳವಾರ, 18 ಅಕ್ಟೋಬರ್ 2016 (17:27 IST)
ಮಧ್ಯಪ್ರದೇಶದ ಪೊಲೀಸರು ನಕ್ಸಲರಿಗಿಂತ ಆರೆಸ್ಸೆಸ್, ಬಜರಂಗದಳ ಕಾರ್ಯಕರ್ತರಿಗೆ ಹೆದರುತ್ತಾರೆ ಎಂದು ಅಮಾನತ್ತುಗೊಂಡ ಪೊಲೀಸರ ಕುಟುಂಬದ ಸದಸ್ಯರು ಆರೋಪಿಸಿದ್ದಾರೆ.
ಆರೆಸ್ಸೆಸ್ ಪ್ರಚಾರಕ ಸುರೇಶ್ ಎಂಬಾತ ಸಂಸದ ಅಸಾದುದ್ದೀನ್ ಒವೈಸಿ ವಿರುದ್ಧ ವಾಟ್ಸಪ್‌ನಲ್ಲಿ ಅವಹೇಳನಾಕಾರಿ ಸಂದೇಶ ಪೋಸ್ಟ್ ಮಾಡಿದ್ದ. ದೂರಿನ ಹಿನ್ನೆಲೆಯಲ್ಲಿ ಆರೋಪಿ ಸುರೇಶ್‌ನನ್ನು ಬಂಧಿಸಲು ಎಎಸ್‌ಪಿ ರಾಜೇಶ್ ಶರ್ಮಾ ನೇತೃತ್ವದ ತಂಡ ತೆರಳಿತ್ತು.   
 
ಆದರೆ, ಆರೆಸ್ಸೆಸ್ ಪ್ರಚಾರಕ ಸುರೇಶ್, ಪೊಲೀಸರೊಂದಿಗೆ ದುರ್ವರ್ತನೆ ತೋರಿದ್ದಲ್ಲದೇ ಆತನ ಬೆಂಬಲಿಗರು ಪೊಲೀಸರ ಮೇಲೆ ಹಲ್ಲೆ ಮಾಡಿದ್ದಾರೆ. ಇದೇ ಸಂದರ್ಭದಲ್ಲಿ ಪೊಲೀಸರಿಂದ ತಪ್ಪಿಸಿಕೊಂಡ ಸುರೇಶ್ ಸ್ಥಳದಿಂದ ಓಡಿಹೋಗಿದ್ದಾನೆ. ನಂತರ ಪೊಲೀಸರು ಆತನ ಬೆನ್ನಟ್ಟಿ ಹಿಡಿದಿದ್ದಾರೆ.
 
ಪೊಲೀಸರೊಂದಿಗೆ ವಾಗ್ವಾದಕ್ಕಿಳಿದ ಸುರೇಶ್ ನೀವು ಯಾರನ್ನು ಬಂಧಿಸುತ್ತಿದ್ದೀರಿ ಎನ್ನುವುದು ತಿಳಿದುಕೊಳ್ಳಿ. ಪ್ರಧಾನಿ ಅಥವಾ ಮುಖ್ಯಮಂತ್ರಿಯನ್ನೇ ಉರುಳಿಸುವ ಸಾಮರ್ಥ್ಯ ಹೊಂದಿದ್ದೇನೆ ಎಂದು ಗುಡುಗಿದ್ದಾನೆ. 
 
ಆರೆಸ್ಸೆಸ್ ಪ್ರಚಾರಕ ಸುರೇಶ್‌ನನ್ನು ಬಂಧಿಸಿದ ಪೊಲೀಸರನ್ನು ಅಮಾನತ್ತುಗೊಳಿಸಿ ಸರಕಾರ ಆದೇಶ ಹೊರಡಿಸಿದೆ. ಇದರಿಂದ ಆಘಾತಗೊಂಡ ಪೊಲೀಸರು ಕುಟುಂಬದ ಸದಸ್ಯರು ಪೊಲೀಸ್ ಮಹಾನಿರ್ದೇಶಕರನ್ನು ಭೇಟಿ ಮಾಡಿ ಅಮಾನತ್ತು ಆದೇಶವನ್ನು ಹಿಂಪಡೆಯಬೇಕು ಎಂದು  ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

ವೆಬ್ದುನಿಯಾವನ್ನು ಓದಿ